ಮೇ, 19 ರಂದು ವಿದ್ಯುತ್ ವ್ಯತ್ಯಯ

May 16, 2026 - 16:48
May 16, 2026 - 16:49
 0  1k
ಮೇ, 19 ರಂದು ವಿದ್ಯುತ್ ವ್ಯತ್ಯಯ

ಮಡಿಕೇರಿ ಮೇ.16:-ವಿರಾಜಪೇಟೆ 66/33/11 ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರ ಮಗ್ಗುಲದಲ್ಲಿ ಮೇ, 19 ರಂದು ಬೆಳಗ್ಗೆ 10 ರಿಂದ 05 ಗಂಟೆಯವರೆಗೆ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿರಾಜಪೇಟೆ, ಸಿದ್ದಾಪುರ ಮತ್ತು ಅಮ್ಮತ್ತಿ ಶಾಖಾ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

 ಆದ್ದರಿಂದ ವಿರಾಜಪೇಟೆ ಪಟ್ಟಣ, ಕಾಕೋಟುಪರಂಬು, ಕದನೂರು, ಕೆದಮುಳ್ಳೂರು, ಬಿಟ್ಟಂಗಾಲ, ಬಿ ಶೆಟ್ಟಿಗೇರಿ, ಆರ್ಜಿ, ಬೇಟೋಳಿ, ಸಿದ್ದಾಪುರ ಪಟ್ಟಣ, ಮಾಲ್ದಾರೆ, ಕರಡಿಗೋಡು, ಗುಹ್ಯ, ಅಮ್ಮತ್ತಿ, ಚೆಂಬೆಬೆಳ್ಳೂರು, ಹಾಲುಗುಂದ, ಕಣ್ಣಂಗಾಲ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

 ಹಾಗೆಯೇ ಮಗ್ಗುಲ 66/33/11 ಕೆ.ವಿ. ವಿರಾಜಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆಯನ್ನು ಕೈಗೆತ್ತಿಕೊಂಡಿರುವುದರಿಂದ 33ಕೆವಿ ಮೂರ್ನಾಡು ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು 33/11 ಕೆವಿ ಮೂರ್ನಾಡು ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಪಾರಾಣೆ, ನಾಪೋಕ್ಲು, ಮೂರ್ನಾಡು, ಹೊದ್ದೂರು ಹಾಗೂ ಮರಗೋಡು ಫೀಡರ್‍ನಲ್ಲಿ ಮೇ, 19 ರಂದು ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ಮಾರ್ಗಗಳಿಂದ ಸರಬರಾಜಾಗುವ ಪಾರಾಣೆ, ನಾಪೋಕ್ಲು, ಮೂರ್ನಾಡು, ಹಾಕತ್ತೂರು, ಹೊಸ್ಕೇರಿ, ಹೊದ್ದೂರು, ನರಿಯಂದಡ, ನಾಪೋಕ್ಲು, ಕುಂಜಿಲ, ಎಮ್ಮೆಮಾಡು, ಬಲ್ಲಮಾವಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0