ಮೇ, 21 ರಂದು ವಿದ್ಯುತ್ ವ್ಯತ್ಯಯ
admincoorgdaily

ಮಡಿಕೇರಿ :-ಶ್ರೀಮಂಗಲ 66/11ಕೆ.ವಿ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್1 ಬಿರುನಾಣಿ ಮತ್ತು ಎಫ್7 ಟಿ.ಶೆಟ್ಟಿಗೇರಿ ಫೀಡರ್‍ನಲ್ಲಿ ಮೇ, 21 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತುರ್ತು ಫೀಡರ್ ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಆದ್ದರಿಂದ ಈ ಫೀಡರ್‍ನ ಗ್ರಾಮಗಳಾದ ತೆರಾಲು, ಬಿರುನಾಣಿ, ಬಾಡಗರಕೇರಿ, ಪೂಕೊಳ, ಪೊರಾಡು, ಕೊಟಿಯಾಲು, ಟಿ.ಶೆಟ್ಟಿಗೇರಿ, ವೆಸ್ಟ್ ಈಸ್ಟ್ ನೆಮ್ಮಲೆ, ಕಾಫಿಕಾಡು ಎಸ್ಟೇಟ್, ಹೊಸಕೆರೆ, ಗೊಟುಕೊಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಅವರು ಕೋರಿದ್ದಾರೆ.