ಮೇ, 29 ರಂದು ವಿದ್ಯುತ್ ವ್ಯತ್ಯಯ
admincoorgdaily

ಮಡಿಕೇರಿ ಮೇ,27:-ಶನಿವಾರಸಂತೆ 66/11 ಕೆ.ವಿ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್2-ಹಂಡ್ಲಿ ಹಾಗೂ ಎಫ್3-ಶನಿವಾರಸಂತೆ ಟೌನ್ ಫೀಡರ್‍ನಲ್ಲಿ ಮೇ, 29 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕೊಡಗು ವಿದ್ಯುತ್ ಜಾಲದ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ಫೀಡರ್‍ನಿಂದ ಹೊರಹೊಮ್ಮುವ ಶನಿವಾರಸಂತೆ ಪಟ್ಟಣ, ತ್ಯಾಗರಾಜ ಕಾಲೋನಿ, ಗುಂಡುರಾವ್ ಬಡಾವಣೆ, ಸಂಪಿಗೆದಾಳು, ಕಿತ್ತೂರು, ಹಂಡ್ಲಿ, ಮಣಗಲಿ, ಕಿತ್ತೂರುಕೊಪ್ಪಲು, ಬೆಳ್ಳಾರಳ್ಳಿ, ಮಾದ್ರವಳ್ಳಿ, ಬಾಗೇರಿ, ಹುಲ್ಸೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಅವರು ಕೋರಿದ್ದಾರೆ.