ಮೇ, 02 ರಂದು ವಿದ್ಯುತ್ ವ್ಯತ್ಯಯ
admincoorgdaily

ಮಡಿಕೇರಿ ಏ.30:-ವಿದ್ಯುತ್ ವಿತರಣಾ ಉಪಕೇಂದ್ರ 66/11 ಕೆ.ವಿ ಪೊನ್ನಂಪೇಟೆಯಿಂದ ಹೊರಹೊಮ್ಮುವ ಎಫ್11 ಕೋಟೂರು ಹಾಗೂ ಎಫ್15 ಬೆಕ್ಕೆಸೊಡ್ಲೂರು ಫೀಡರ್‌ನಲ್ಲಿ ಮೇ, 02 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತುರ್ತು ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ತೂಚಮಕೇರಿ, ಬಲ್ಯಮಂಡೂರು, ಚಿಕ್ಕಮಂಡೂರು, ಕೋಟೂರು, ಮುಗುಟಗೇರಿ, ಬೆಕ್ಕೆಸೊಡ್ಲೂರು, ಬಲ್ಯಮಂಡೂರು, ಕೋತೂರು, ಕಾನೂರು, ವಡ್ಡರಮಾಡು, ನಿಡುಗುಂಬ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.