ಅ.16ರಂದು ವಿದ್ಯುತ್ ವ್ಯತ್ಯಯ

ಅ.16ರಂದು ವಿದ್ಯುತ್ ವ್ಯತ್ಯಯ

ಮಡಿಕೇರಿ: 66/33/11 ಕೆ.ವಿ ವಿರಾಜಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದ ಅಮ್ಮತ್ತಿ ಶಾಖಾ ವ್ಯಾಪ್ತಿಯ VF-9 ಚೆಂಬೆಬೆಳ್ಳೂರು ಫೀಡರ್‌ನಲ್ಲಿ ದಿನಾಂಕ 16.10.2025 ರಂದು ಬೆಳಿಗ್ಗೆ 09.00ರಿಂದ ಸಂಜೆ 5.00 ಗಂಟೆಯವರೆಗೆ ಫೀಡರ್ ನಿರ್ವಾಹಣೆ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ಸದರಿ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಚೆಂಬೆಬೆಳ್ಳೂರು, ಹಾಲುಗುಂದ, ಕೊಂಡಂಗೇರಿ, ಐಮಂಗಲ, ಕಣ್ಣಂಗಾಲ, ಅಮ್ಮತ್ತಿ, ಒಂಟಿಯಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.