ಸೆ.22 ರಂದು ವಿದ್ಯುತ್ ವ್ಯತ್ಯಯ
admincoorgdaily
ಮಡಿಕೇರಿ :-66/11 ಕೆ.ವಿ ಪೊನ್ನಂಪೇಟೆ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್4 ತಿತಿಮತಿ ಫೀಡರ್‍ನಲ್ಲಿ ಸೆಪ್ಟೆಂಬರ್, 22 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಫೀಡರ್ ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಬಾಲಾಜಿ, ರುದ್ರಬೀಡು, ಮಾಯಮುಡಿ, ಬೆಮ್ಮತ್ತಿ, ಕೋಣನಕಟ್ಟೆ, ದೇವರಪುರ, ಅಂಬುಕೋಟೆ, ಕಲ್ಲಳ, ಭದ್ರಗೋಳ, ನೋಕ್ಯ, ತಿತಿಮತಿ, ಹೆಡತೊರೆ, ರೇಷ್ಮೆ, ಹೆಬ್ಬಾಲೆ, ಮರೂರು, ದೇವಮಚ್ಚಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಅವರು ಕೋರಿದ್ದಾರೆ.