Kodagu

ಆಗಸ್ಟ್ 30 ರಂದು ಕೊಡಗು ಜಿಲ್ಲೆಯ ವಿವಿಧೆಡೆ ವಿದ್ಯುತ್ ವ್ಯತ್ಯಯ

admincoorgdaily

ಮಡಿಕೇರಿ:66/33/11 ಕೆ.ವಿ ವಿರಾಜಪೇಟೆ ವಿದ್ಯುತ್ ವಿತರಣಾ ಉಪಕೇಂದ್ರ ಮಗ್ಗುಲ, 33/11ಕೆವಿ ಮೂರ್ನಾಡು ಹಾಗೂ 33/11ಕೆವಿ ಸಿದ್ದಾಪುರ ವಿವಿ ಕೇಂದ್ರದಲ್ಲಿ ನಿರ್ವಾಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಸದರಿ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ 30.08.2025 ರಂದು ಬೆಳಗ್ಗೆ 09.30 ರಿಂದ ಸಂಜೆ 3.00 ಗಂಟೆಯವರೆಗೆ ವಿದ್ಯುತ್ ವ್ಯತ್ಯಾಯವಾಗಲಿದೆ, ಆದ್ದರಿಂದ ವಿರಾಜಪೇಟೆ ಪಟ್ಟಣ, ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ, ಅರ್ಜಿ, ಬೇಟೋಳಿ, ಕದನೂರು, ಕಾಕೋಟುಪರಂಬು, ಕೆದಮುಳ್ಳೂರು, ಬಿಟ್ಟಂಗಾಲ, ಬಿ.ಶೆಟ್ಟಗೇರಿ, ಆಮ್ಮತ್ತಿ, ಚೆಂಬೆಬೆಳ್ಳೂರು, ಕಣ್ಣಂಗಾಲ, ಹಾಲುಗುಂದ, ಕೊಂಡಂಗೇರಿ, ಆಮತ್ತಿ, ಬಿಳುಗುಂದ, ಮಾಲ್ದಾರೆ, ಕರಡಿಗೋಡು, ಗುಹ್ಯಾ, ಚೆನ್ನಯ್ಯನಕೋಟೆ, ಅಟ್ಟೂರು ತಾರಿಕಟ್ಟೆ, ಚೆನ್ನಂಗಿ, ಇಂಜಿಲಗೇರಿ, ಪುಲಿಯೇರಿ, ಮೂರ್ನಾಡು, ಪಾರಾಣೆ, ನಾಪೋಕ್ಲು, ಹೊದ್ದೂರು, ಮರಗೋಡು, ಹಾಕತ್ತೂರು, ಹೊಸ್ಕೇರಿ, ನರಿಯಂದಡ, ಕುಂಜಿಲ, ಎಮ್ಮೆಮಾಡು, ಬಲ್ಲಮಾವಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಕಾರ್ಯ ಮತ್ತು ಪಾಲನೆ ವಿಭಾಗ ಕೋರಿದ್ದಾರೆ.