Kodagu

ಅ.11 (ನಾಳೆ) ಕೊಡಗಿನಲ್ಲಿ ವಿವಿಧೆಡೆ ವಿದ್ಯುತ್ ವ್ಯತ್ಯಯ

admincoorgdaily

ಮಡಿಕೇರಿ:33/11 ಕೆ.ವಿ ಮೂರ್ನಾಡು ವಿದ್ಯುತ್ ವಿತರಣಾ ಉಪಕೇಂದ್ರದ ಕೇಂದ್ರದಿಂದ ಹೊರಹೊಮ್ಮುವ F5 ಹೊದ್ದೂರು ಹಾಗೂ F2 ನಾಪೋಕ್ಲು ಫೀಡರ್‌ನಲ್ಲಿ ದಿನಾಂಕ 11.10.2025 ರಂದು ಬೆಳಿಗ್ಗೆ 10.00ರಿಂದ ಸಂಜೆ 5.00 ಗಂಟೆಯವರೆಗೆ ಕೊಡಗು ವಿದ್ಯುತ್ ಜಾಲದ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಸದರಿ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಹೊದ್ದೂರು, ಕೊಟ್ಟಮುಡಿ, ಪಾಲೂರು, ಹೊದವಾಡ, ನಾಪೋಕ್ಲು, ಬೇತು, ಹಳೆತಾಲೂಕು, ಕೊಳಕೇರಿ, ಕಕ್ಕಬೆ, ನಾಲಡಿ, ಚೋನಕೆರೆ, ಎಮ್ಮೆಮಾಡು, ಪಡಿಯಾನಿ, ಬಲ್ಲಮಾವಟಿ, ಪೇರೂರು, ಕಿಯಲ್‌ಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ, ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಕಾರ್ಯ ಮತ್ತು ಪಾಲನೆ ವಿಭಾಗ, ಚಾವಿಸನಿನಿ, ಮಡಿಕೇರಿ ಕೋರಿದೆ.