ನಾಳೆ ವಿರಾಜಪೇಟೆ ಭಾಗದ ವಿವಿಧೆಡೆ ವಿದ್ಯುತ್ ವ್ಯತ್ಯಯ

ನಾಳೆ ವಿರಾಜಪೇಟೆ ಭಾಗದ ವಿವಿಧೆಡೆ ವಿದ್ಯುತ್ ವ್ಯತ್ಯಯ

ವಿರಾಜಪೇಟೆ:66/33/11 ಕೆ.ವಿ ವಿರಾಜಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದ ವಿರಾಜಪೇಟೆ ಶಾಖಾ ವ್ಯಾಪ್ತಿಯ ಕೆ.ಎಸ್.ಆರ್.ಟಿ.ಸಿ ಪಾಲಂಗಾಲ, ಬೇತಿ.ಕೆ.ಎಸ್.ಆರ್.ಟಿ.ಸಿ, ಹಾಗೂ ಕೆ.ಇ.ಬಿ ಫೀಡರ್‌ಗಳಲ್ಲಿ ನಾಳೆ(ಆಗಸ್ಟ್ 12) ರಂದು ಬೆಳಿಗ್ಗೆ 10.00ರಿಂದ ಸಂಜೆ 5.00 ಗಂಟೆಯವರೆಗೆ ಸದರಿ ಫೀಡರ್‌ಗಳಲ್ಲಿ ಡಿ.ಪಿ.ಆರ್ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಸದರಿ ಫೀಡರ್‌ನಿಂದ ಹೊರಹೊಮ್ಮುವ ಮಾರ್ಗದಲ್ಲಿ ಬರುವ ಬೆಟ್ಟೋಳಿ, ತೋರ, ಕೆದಮುಳ್ಳೂರು, ಬೇತ್ರಿ, ಕದನೂರು, ಮೈತಾಡಿ, ಅರಮೇರಿ, ಕಾಕೋಟುಪರಂಬು, ಕಡಂಗ, ಕಡಂಗ ಮರೂರು, ಅರಸುನಗರ, ವಿದ್ಯಾನಗರ, ಪಂಚಾರ ಪೇಟೆ, ಮೀನು ಪೇಟೆ, ಅರ್ಜಿ, ಹೆಗ್ಗಳ, ಬೋಯಿಕೇರಿ, ಚಿಕ್ಕಪೇಟೆ, ಶಾಂತಿನಗರ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕಾರ್ಯನಿವಾಬಹಕ ಇಂಜಿನಿಯರ್ (ವಿ) ಕಾರ್ಯ ಮತ್ತು ಪಾಲನೆ ವಿಭಾಗ, ಚಾವಿಸನಿನಿ, ಮಡಿಕೇರಿ ಅವರು ಕೋರಿದ್ದಾರೆ.