ನ.12 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
admincoorgdaily
ಮಡಿಕೇರಿ:-66/11 ಕೆ.ವಿ ಮಡಿಕೇರಿ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ರಾಜಾಸೀಟ್, ಗದ್ದಿಗೆ, ಮೇಕೇರಿ, ಕೋಟೆ, ಭಾಗಮಂಡಲ, ಬೋಯಿಕೇರಿ, ಸಂಪಾಜೆ, ಕುಂಡಾಮೇಸ್ತ್ರಿ, ಗಾಳಿಬೀಡು, ಓಂಕಾರೇಶ್ವರ, ಜಿ.ಟಿ ರಸ್ತೆ, ಮಕ್ಕಂದೂರು, ಕೆ.ಎಸ್.ಆರ್.ಟಿ.ಸಿ ಫೀಡರ್‍ಗಳಲ್ಲಿ ನವೆಂಬರ್, 12 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿರ್ವಹಿಸಬೇಕಾಗಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಮಡಿಕೇರಿ ನಗರ, ಮೇಕೇರಿ, ಭಾಗಮಂಡಲ, ಸಂಪಾಜೆ, ಹೆಬ್ಬೆಟ್ಟಗೇರಿ, ಕೆ.ಬಾಡಗ, ತಾಳತ್ತಮನೆ, ಬೆಟ್ಟಗೇರಿ, ಗಾಳಿಬೀಡು, ಚೆಟ್ಟಿಮಾನಿ, ಚೇರಂಬಾಣೆ, ಮಕ್ಕಂದೂರು, ಬೋಯಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.