ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

Apr 14, 2026 - 20:26
 0  1.8k
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ಮಡಿಕೇರಿ; 66/33/11 ಕೆ.ವಿ MUSS ಮಗ್ಗುಲ, ವಿರಾಜಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ 33KV ಮೂರ್ನಾಡು ಫೀಡರ್ ನಲ್ಲಿ ದಿನಾಂಕ 15.04.2026 ರಂದು ಬೆಳಿಗ್ಗೆ 10.00ರಿಂದ ಸಂಜೆ 5.00 ಗಂಟೆಯವರೆಗೆ ಮಳೆಗಾಲದ ಮುಂಜಾಗೃತ ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಸದರಿ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ 33/11 ಕೆ.ವಿ MUSS ಮೂರ್ನಾಡು ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಪಾರಾಣೆ, ನಾಪೋಕ್ಲು, ಮೂರ್ನಾಡು, ಹೊದ್ದೂರು ಹಾಗೂ ಮರಗೋಡು ಫೀಡರ್ ನಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.ಸದರಿ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಮೂರ್ನಾಡು, ಮರಗೋಡು, ಹಾಕತ್ತೂರು, ಹೊಸ್ಕೇರಿ, ಹೊದ್ದೂರು, ನರಿಯಂದಡ, ನಾಪೋಕ್ಲು, ಕುಂಜಿಲ, ಎಮ್ಮೆಮಾಡು, ಬಲ್ಲಮಾವಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 2
Wow Wow 1