ಕ್ರೀಡೆಯಲ್ಲಿ ಅಭ್ಯಾಸ ನಿರಂತರವಾಗಿರಬೇಕು; ಒಲಂಪಿಯನ್ ಮನೆಯಪಂಡ ಸೋಮಯ್ಯ

Apr 17, 2026 - 19:17
 0  124
ಕ್ರೀಡೆಯಲ್ಲಿ ಅಭ್ಯಾಸ ನಿರಂತರವಾಗಿರಬೇಕು; ಒಲಂಪಿಯನ್ ಮನೆಯಪಂಡ ಸೋಮಯ್ಯ

ಮಡಿಕೇರಿ,ಏ.17; ತರಬೇತಿ ಶಿಬಿರಗಳಲ್ಲಿ ಕಲಿತದ್ದನ್ನು ಮಕ್ಕಳು ಶಿಬಿರದ ನಂತರವೂ ಅಭ್ಯಾಸ ಮಾಡಬೇಕೆಂದು ಮೂರು ಬಾರಿ ಒಲಂಪಿಕ್ಸ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಹಿರಿಯ ಹಾಕಿ ಆಟಗಾರ ಮನೆಯಪಂಡ ಸೋಮಯ್ಯ ಕರೆ ನೀಡಿದರು. 

ಮಡಿಕೇರಿಯ ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಸ್ನರಣಾರ್ಥ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತಿರುವ ಮಕ್ಕಳ ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರಕ್ಕೆ ಆಗಮಿಸಿ ಮಕ್ಕಳಿಗೆ ಹಿತವಚನ ನುಡಿದರು. ಕ್ರಿಕೆಟ್ ಆಟಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆಯಾದರೂ ಕೊಡಗು ಜಿಲ್ಲೆಯಲ್ಲಿ ಹಾಕಿ ಆಟ ಪ್ರಥಮವಾಗಿದೆ.

ಈ ಶಿಬಿರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಾಕಿ ಆಟದಲ್ಲಿ ತೊಡಗಿಸಿರುವದು ಹೆಮ್ಮೆಯ ಸಂಗತಿ. ಶಿಬಿರದಲ್ಲಿ ತರಬೇತುದಾರರು ಹೇಳಿಕೊಡುವದನ್ನು ಗಮನವಿಟ್ಟು ಕಲಿಯಬೇಕು. ಯೋಗ ತರಬೇತಿ ಕೂಡುತ್ತಿದ್ದು, ಅದು ಆರೋಗ್ಯಕ್ಕೆ ಉತ್ತಮ. ಶಿಬಿರದ ಬಳಿಕವೂ ಮಕ್ಕಳು ಅಭ್ಯಾಸ ಮುಂದುವರೆಸಬೇಕೆಂದು ಕಿವಿ ಮಾತು ಹೇಳಿದರು. ಪದ್ಮಶ್ರೀ ಪ್ರಶಸ್ತಿ ಪಡೆದ, ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಹಾಗೂ ಪ್ರಸ್ತುತ ಭಾರತ ತಂಡದಲ್ಲಿ ಆಡುತ್ತಿರುವ ಆಟಗಾರರ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. 

ಇದೇ ಸಂದರ್ಭದಲ್ಲಿ ಶಿಬಿರಾರ್ಥಿ ಕುಶ್ ಎಂಬಾತನ ಹುಟ್ಟು ಹಬ್ಬ ಆಚರಿಸಿ ಶುಭ ಕೋರಿ ಸಿಹಿ ಹಂಚಲಾಯಿತು. ಯೊಗಗುರು ಕೆ.ಕೆ.ಮಹೇಶ್‌ಕುಮಾರ್ ಸೋಮಯ್ಯ ಅವರ ಪರಿಚಯ ಮಾಡಿದರು. ಶಿಬಿರದ ಸಂಚಾಲಕ ಬಾಬು ಸೋಮಯ್ಯ, ತರಬೇತುದಾರರು, ಪೋಷಕರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0