ಕೊಡಗು ಜಿಲ್ಲಾ ಲೆದರ್ ಬಾಲ್ ಬಾಲಕರ ಕ್ರಿಕೆಟ್ ತಂಡಕ್ಕೆ ಪ್ರಗತಿ ಶಾಲೆಯ ಬಾಲಕರು ಆಯ್ಕೆ
admincoorgdaily

ಮಡಿಕೇರಿ;ವಿರಾಜಪೇಟೆಯ ಪ್ರಗತಿ ನರ್ಸರಿ, ಪ್ರೈಮರಿ ಮತ್ತು ಹೈ ಸ್ಕೂಲ್ ಹಾಗೂ ಪ್ರಗತಿ ಕ್ರಿಕೆಟ್ ಅಕಾಡೆಮಿಯ ವಿದ್ಯಾರ್ಥಿಗಳು ಕೊಡಗು ಜಿಲ್ಲಾ ಲೆದರ್ ಬಾಲ್ ಕ್ರಿಕೆಟ್ ತಂಡಗಳಿಗೆ ಆಯ್ಕೆಯಾಗಿದ್ದಾರೆ.
ಅಂಡರ್-14 ವಿಭಾಗದಲ್ಲಿ ನೀರವ್ ದೇವ್, ಕೌಶಿಕ್ ಎಸ್ ಗೌಡ ಆಯ್ಕೆಯಾಗಿದ್ದು,ಇವರು ಕೊಡಗು ಜಿಲ್ಲಾ ಅಂಡರ್-14 ಬಾಲಕರ ತಂಡವನ್ನು ಪ್ರತಿನಿಧಿಸಿ ಮಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.
ಅಂಡರ್-16 ವಿಭಾಗದಲ್ಲಿ,ಯಶಸ್ ಗೌಡ,ಹರಿಕೃಷ್ಣ,ಲೋಹನ್,ವೃತನ್, ಕೇಶವ್,ಮೊಹಮ್ಮದ್ ನಿಹಾಲ್,ಸೋಹನ್ ಇವರು ಕೊಡಗು ಜಿಲ್ಲಾ ಅಂಡರ್-16 ತಂಡಕ್ಕೆ ಆಯ್ಕೆಯಾಗಿದ್ದು, ಜಿಲ್ಲೆಯ ಪರವಾಗಿ ಮುಂದಿನ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.
ವಿದ್ಯಾರ್ಥಿಗಳ ಮತ್ತು ತರಬೇತುದಾರರಾದ ಶಿವಶಕ್ತಿ ಅವರಿಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ತರಬೇತುದಾರರು ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ಶಾಲೆ ಹಾಗೂ ಜಿಲ್ಲೆಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.