Kodagu

ರೋಟರಿ ವುಡ್ಸ್ ಅಧ್ಯಕ್ಷೆಯಾಗಿ ಪ್ರಮೀಳಾ ಶೆಟ್ಟಿ ಕಾಯ೯ದಶಿ೯ಯಾಗಿ ಸ್ಮಿತಾಚಂಗಪ್ಪ ನೇಮಕ

admincoorgdaily

ರೋಟರಿ ವುಡ್ಸ್ ಅಧ್ಯಕ್ಷೆಯಾಗಿ ಪ್ರಮೀಳಾ ಶೆಟ್ಟಿ ಕಾಯ೯ದಶಿ೯ಯಾಗಿ ಸ್ಮಿತಾಚಂಗಪ್ಪ ನೇಮಕ

ಮಡಿಕೇರಿ ಜೂನ್ 23 - ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆಯ ನೂತನ ಅಧ್ಯಕ್ಷೆಯಾಗಿ ಪ್ರಮೀಳಾ ಶೆಟ್ಟಿ, ಕಾಯ೯ದಶಿ೯ಯಾಗಿ ಸ್ಮಿತಾ ಚಂಗಪ್ಪ ಮತ್ತು ವಲಯ ಸೇನಾನಿಯಾಗಿ ಕೆ. ವಸಂತ್ ಕುಮಾರ್ ನೇಮಕಗೊಂಡಿದ್ದಾರೆ.

ರೋಟರಿ ವುಡ್ಸ್ ಸಂಸ್ಥೆಗೆ 5 ನೇ ವಷ೯ದ ಅಧ್ಯಕ್ಷೆಯಾಗಿ ಪ್ರಮೀಳಾ ಶೆಟ್ಟಿ ಕಾಯ೯ದಶಿ೯ಯಾಗಿ ಸ್ಮಿತಾ ಚಂಗಪ್ಪ ಆಯ್ಕೆ ಮೂಲಕ ರೋಟರಿ ವುಡ್ಸ್ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆ, ಕಾಯ೯ದಶಿ೯ಯನ್ನು ಪಡೆದುಕೊಂಡ ಹಿರಿಮೆಗೆ ಪಾತ್ರವಾಗಿದೆ. ರೋಟರಿ ವುಡ್ಸ್, ಮತ್ತು ಆಲೂರು ಸಿದ್ದಾಪುರ ರೋಟರಿ ಸಂಸ್ಥೆಗಳಿಗೆ ರೋಟರಿ ವುಡ್ಸ್ ಮಾಜಿ ಅಧ್ಯಕ್ಷ ಕೆ. ವಸಂತ್ ಕುಮಾರ್ ವಲಯ ಸೇನಾನಿಯಾಗಿ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷ, ಕಾಯ೯ದಶಿ೯ ಹಾಗೂ ಆಡಳಿತ ಮಂಡಳಿ ನಿದೇ೯ಶಕರಿಗೆ ಪದಗ್ರಹಣ ಸಮಾರಂಭವು ಜೂನ್ 27 ರಂದು ಶನಿವಾರ ಸಂಜೆ 6.30 ಗಂಟೆಗೆ ಮಡಿಕೇರಿ ಕೊಡವ ಸಮಾಜದಲ್ಲಿ ಆಯೋಜಿತವಾಗಿದೆ.

ಬೆಂಗಳೂರು ರೋಟರಿ ಸಂಸ್ಥೆಯ ಮಾಜಿ ಗವನ೯ರ್ ಎಲಿಜಬೆತ್ ಚೆರಿಯನ್ ಪದಗ್ರಹಣ ನೆರವೇರಿಸಲಿದ್ದು, ರೋಟರಿ ಸಹಾಯಕ ಗವನ೯ರ್ ಎಂ.ಡಿ. ರಂಗಸ್ವಾಮಿ, (2026-27) ಪಿ.ಎಂ. ಧಿಲನ್ ಚಂಗಪ್ಪ (2025-26) , ವಲಯ ಸೇನಾನಿಗಳಾದ ಕೆ. ವಸಂತ್ ಕುಮಾರ್ (2026-27), ಕೆ.ಸಿ.ಕಾಯ೯ಪ್ಪ (2025-26) ನಿಗ೯ಮಿತ ಅಧ್ಯಕ್ಷ ಕಿರಣ್ ಕುಂದರ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.