ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ;ಸೋಮವಾರಪೇಟೆ ಮೂಲದ ಓರ್ವ ಆರೋಪಿಗೆ ಜಾಮೀನು ಮಂಜೂರು

Mar 26, 2026 - 13:20
 0  1.4k
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ;ಸೋಮವಾರಪೇಟೆ ಮೂಲದ ಓರ್ವ ಆರೋಪಿಗೆ ಜಾಮೀನು ಮಂಜೂರು
ಪ್ರವೀಣ್ ನೆಟ್ಟಾರು

ಮಂಗಳೂರು;ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳ ಓರ್ವನಿಗೆ ಜಾಮೀನು ಮಂಜೂರಾಗಿದೆ. ಕೊಡಗಿನ ಸೋಮವಾರಪೇಟೆ ಮೂಲದ ರಿಯಾಜ್ ಎಚ್.ವೈ ಎಂಬ ವ್ಯಕ್ತಿಗೆ ಜಾಮೀನು ಮಂಜೂರಾಗಿದೆ. ಜುಲೈ 26,2022 ರಂದು ತನ್ನ ಮನೆಗೆ ಹೊರಟಿದ್ದ ಪ್ರವೀಣ್‌ ನೆಟ್ಟಾ‌ರ್ ಮೇಲೆ ಆರೋಪಿಗಳು ಮಾರಕಾಸ್ತ್ರದಿಂದ ದಾಳಿ ಮಾಡಿ ಕೊಲೆಗೈದಿದ್ದರು.

 ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್‌ಐಎ ಒಟ್ಟು 26 ಮಂದಿಯನ್ನು ವಶಕ್ಕೆ ಪಡೆದುಕೊಂಡಿತ್ತು. ಈ ಪ್ರಕರಣದ 26 ನೇ ಆರೋಪಿಯಾಗಿರುವ ಕೊಡಗು ಜಿಲ್ಲೆಯ ಸೋಮವಾರಪೇಟೆ ಮೂಲದ ರಿಯಾಜ್ ಎಂಬಾತನಿಗೆ ಜಾಮೀನು ಮಂಜೂರಾಗಿರುವ ಕುರಿತು ವರದಿಯಾಗಿದೆ. ಆರೋಪಿಗಳಿಗೆ ಆಶ್ರಯ ಕಲ್ಪಿಸಿದ್ದ ಎಂಬ ಹಿನ್ನೆಲೆಯಲ್ಲಿ ಈತನ ಬಂಧನವಾಗಿತ್ತು. ಈ ಪ್ರಕರಣ ಪ್ರಮುಖ ಆರೋಪಿ ಮುಸ್ತಾಫಾ ಪೈಚಾರ್‌ಗೆ ಎಚ್ ವೈ ರಿಯಾಜ್ ಆಶ್ರಯ ನೀಡಿದ್ದ ಎನ್ನಲಾಗಿತ್ತು..

What's Your Reaction?

Like Like 0
Dislike Dislike 3
Love Love 1
Funny Funny 3
Angry Angry 4
Sad Sad 1
Wow Wow 0