Kodagu

ಮಡಿಕೇರಿಯಲ್ಲಿ ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಪ್ರತಿಭಟನೆ

admincoorgdaily

ಮಡಿಕೇರಿಯಲ್ಲಿ ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಪ್ರತಿಭಟನೆ

ಮಡಿಕೇರಿ: ಮಹರ್ಷಿ ವಾಲ್ಮೀಕಿ ನಿಗಮದ ೧೮೭ ಕೋಟಿ ಅಕ್ರಮ ಪ್ರಕರಣದ ಆರೋಪ ಎದುರಿಸುತ್ತಿರುವ ಬಿ.ನಾಗೇಂದ್ರ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿರುವುದನ್ನು ಖಂಡಿಸಿ ಸೋಮವಾರಪೇಟೆ ಮಂಡಲ ಬಿಜೆಪಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿತು.

ಮಂಡಲ ಅಧ್ಯಕ್ಷ ಗೌತಮ್ ಮಾತನಾಡಿ, ನ್ಯಾಯಾಂಗ ವಿಚಾರಣೆ ನಡೆಯುತ್ತಿರುವಾಗಲೇ ಕಳಂಕಿತರಿಗೆ ಸಚಿವ ಸ್ಥಾನ ನೀಡಿರುವುದು ಕಾಂಗ್ರೆಸ್‌ನ ಹಳೇ ಚಾಳಿ. ಬಡಜನರ ಹಣ ಗುಳುಂ ಮಾಡಿದವರೇ ಮಂತ್ರಿಯಾದರೆ ನೈತಿಕತೆ ಏನಾಗುತ್ತದೆ? ಎಂದು ಪ್ರಶ್ನಿಸಿದರು.

 ಬಿಜೆಪಿ ಜಿಲ್ಲಾ ವಕ್ತಾರ ಅಭಿಮನ್ಯು ಮಾತನಾಡಿ, ನಾಗೇಂದ್ರ ಅವರ ವಿರುದ್ಧ ತೆಲಂಗಾಣ ಚುನಾವಣೆಗೆ ಹಣ ವರ್ಗಾವಣೆಯ ಆರೋಪವಿದೆ. ತನಿಖೆ ಬಾಕಿ ಇರುವಾಗಲೇ ಸಂಪುಟಕ್ಕೆ ಸೇರಿಸಿರುವುದು ರಾಹುಲ್, ಸೋನಿಯಾ ಅವರನ್ನು ಓಲೈಸಲು ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ಎಂಎಲ್‌ಸಿ ಸುನಿಲ್ ಸುಬ್ರಮಣಿ, ವಕ್ತಾರ ಅರುಣ್ ಕುಮಾರ್, ಸೋಮವಾರಪೇಟೆ ಮಂಡಲ ಬಿಜೆಪಿಯ ಉಪಾಧ್ಯಕ್ಷರಾದ ಕನಕಮ್ಮ, ಎಂ.ಪಿ.ಕೃಷ್ಣಪ್ಪ, ಪ್ರಮುಖರಾದ ದರ್ಶನ್ ಜೋಯಪ್ಪ, ಸಂಜು ಪೊನ್ನಪ್ಪ ಬಿಜೆಪಿ ಕಾರ್ಯಕರ್ತರಿದ್ದರು.