ಸಮ ಸಮಾಜದ ನಿರ್ಮಾಣಕ್ಕಾಗಿ ಜನಜಾಗೃತಿ ಕಾರ್ಯಕ್ರಮ;ಶಿಕ್ಷಣದಿಂದ ಮಾತ್ರ ಸಮಾಜವನ್ನು ಬದಲಾಯಿಸಬಹುದು; ಶಾಸಕ‌‌ ಡಾ.ಮಂತರ್ ಗೌಡ

May 9, 2026 - 17:21
May 9, 2026 - 21:14
 0  94
ಸಮ ಸಮಾಜದ ನಿರ್ಮಾಣಕ್ಕಾಗಿ ಜನಜಾಗೃತಿ ಕಾರ್ಯಕ್ರಮ;ಶಿಕ್ಷಣದಿಂದ ಮಾತ್ರ ಸಮಾಜವನ್ನು ಬದಲಾಯಿಸಬಹುದು; ಶಾಸಕ‌‌ ಡಾ.ಮಂತರ್ ಗೌಡ

ಶನಿವಾರಸಂತೆ:ಮೇ9:-ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ವಿದ್ಯಾವಂತರಿಗೆ ಮಾಡಿಕೊಟ್ಟಿರುವ ಅವಕಾಶದಿಂದ ನಾವಿಂದು ಸಮಾಜದಲ್ಲಿ ಗೌರವ ಸಂಪಾದಿಸುತ್ತಿದ್ದೇವೆ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಅವರು ಅಭಿಪ್ರಾಯಪಟ್ಟರು. ಅವರು ಸಮಿಪದ ಮಾದ್ರೆ ಗ್ರಾಮದ ಡಾ.ಭೀಮ್‌ರಾವ್ ಯುವಕ ಸಂಘ ಹಾಗೂ ಗ್ರಾಮಾಭಿವೃದ್ದಿ ಸಮಿತಿ ವತಿಯಿಂದ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮ ಸಮಾಜದ ನಿರ್ಮಾಣಕ್ಕಾಗಿ ಜನಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಮಾಜದಲ್ಲಿ ಸ್ಥಾನಮಾನದಲ್ಲಿರುವರಿಗೆ, ಜನರು ಆರಿಸಿದ ಜನಪ್ರತಿನಿಧಿಗಳಿಗೆ ಜನರು ಗೌರವ ಕೊಡುವುದು ಕೇವಲ ಅವರ ಹುದ್ದೆಗೆ ಅಲ್ಲ ಬದಲಿಗೆ ಅವರು ಪಡೆದುಕೊಂಡಿರುವ ಶಿಕ್ಷಣಕ್ಕೆ ಎಂಬುವುದನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರು ಸಂವಿಧಾನದಲ್ಲಿ ಮಾಡಿಕೊಟ್ಟಿರುವ ಅವಕಾಶದಲ್ಲಿ ಸ್ಥಾನಮಾನ, ಹುದ್ದೆ ಅಧಿಕಾರ ಒಂದು ಭಾಗವಾದರೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವುದು ಮತ್ತೊಂದು ಭಾಗವಾಗಿದೆ ಎಂಬುವುದನ್ನು ತಿಳಿಸಿಕೊಟ್ಟಿದ್ದಾರೆ ಈ ದಿಸೆಯಲ್ಲಿ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದನ್ನು ಆಸ್ತಿಯನ್ನಾಗಿ ಮಾಡಬೇಕು ಶಿಕ್ಷಣದಿಂದ ಮಾತ್ರ ಸಮಾಜವನ್ನು ಬದಲಾಯಿಸಬಹುದು ಎಂದು ಹೇಳಿದರು. ಪ್ರತಿಯೊಬ್ಬರು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮೂಲಕ ಸಮಾಜದ ಅಭಿವೃದ್ದಿ ಕಾರ್ಯದಲ್ಲಿ ಕೈಜೋಡಿಸಬೇಕು ಈ ಭಾಗದಲ್ಲಿ ಮತ್ತಷ್ಟು ಗ್ರಾಮೀಣ ರಸ್ತೆ ಅಭಿವೃದ್ದಿ ಕಾರ್ಯ ಆಗಬೇಕಾಗಿದ್ದು ಈ ಬಗ್ಗೆ ಚಿಂತನೆ ಹರಿಸಲಾಗುವುದು ಎಂದು ಹೇಳಿದರು.

ಮಾಜಿ ತಾ.ಪಂ.ಸದಸ್ಯ ಜೆ.ಆರ್.ಪಾಲಾಕ್ಷ, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಜನಾರ್ಧನ್ ಮಾತನಾಡಿದರು ವೇದಿಕೆಯಲ್ಲಿ ದುಂಡಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಅಬ್ಬಾಸ್, ಮಾದ್ರೆ ಜಯ್ ಭೀಮ್ ರಾವ್ ಯುವಕ ಸಂಘದ ಅಧ್ಯಕ್ಷ ಎಂ.ಕೆ.ಮಂಜುನಾಥ್, ಜಯಪ್ಪ ಹಾನಗಲ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಂ.ಎಸ್.ವೀರೇಂದ್ರ ಮುಂತಾದವರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0