ಪುಡಿಯಂಡ ಕೊಡವ ಜಮ್ಮಾ ಮುಸ್ಲಿಂ ಕ್ರಿಕೆಟ್ ಕ್ರೀಡಾಕೂಟ; ಇಂದು ಫೈನಲ್

May 4, 2026 - 10:42
 0  241
ಪುಡಿಯಂಡ ಕೊಡವ  ಜಮ್ಮಾ ಮುಸ್ಲಿಂ ಕ್ರಿಕೆಟ್ ಕ್ರೀಡಾಕೂಟ; ಇಂದು ಫೈನಲ್

ಕಡಂಗ:ಪುಡಿಯಂಡ ಕುಟುಂಬಸ್ಥರು ಆಯೋಜಿಸಿರುವ ಮೂರನೇ ವರ್ಷದ ಕೊಡವ ಜಮ್ಮಾ ಮುಸ್ಲಿಂ ಕುಟುಂಬಗಳ ಕ್ರಿಕೆಟ್ ಕ್ರೀಡಾಕೂಟವು ಅರಮೇರಿ ಎಸ್ ಎಂ ಎಸ್ ಶಾಲಾ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಕ್ರೀಡಾಕೂಟದಲ್ಲಿ 72 ತಂಡಗಳು ಭಾಗವಹಿಸಿ ಕೊನೆಯಲ್ಲಿ 4 ತಂಡಗಳು ಸೆಮಿಫೈನಲ್ ಗೆ ಲಗ್ಗೆ ಇಟ್ಟಿವೆ. ಇಂದು (ಸೋಮವಾರ )ಬೆಳಿಗ್ಗೆ 9 ಗಂಟೆಗೆ ಮೊದಲ ಸೆಮಿಫೈನಲ್ ಪಂದ್ಯಾಟವು ವಯಕೋಲಂಡ ಮತ್ತು ಕಿಕ್ಕರೆ ಅಂಬಟ್ಟಿ ನಡುವೆ ನಡೆಯಲಿದೆ . ಎರಡನೇ ಸೆಮಿಫೈನಲ್ ಪಂದ್ಯಾಟವು ಕೂರ್ಲಿಕಾರಂಡ ಎಮ್ಮೆಮಾಡು ಮತ್ತು ಕುವೆಲೆರ ಚಿಟ್ಟಡೆ ತಂಡದ ನೆಡುವೆ ನಡೆಯಲಿದೆ. ಇಂದು (ಸೋಮವಾರ ) ಮಧ್ಯಾಹ್ನ 12 ಗಂಟೆಗೆ ಕ್ರೀಡಾಕೂಟದ ಸಮಾರೂಪ ಸಮಾರಂಭ ಮತ್ತು ಫೈನಲ್ ಪಂದ್ಯಾಟವು ನಡೆಯಲಿದೆ.

 ವರದಿ;ನೌಫಲ್

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0