ಪಲ್ಸ್ ಪೋಲಿಯೋ: ಕೊಡಗಿನಲ್ಲಿ ಗುರಿ ಮೀರಿದ ಸಾಧನೆ, ಶೇ.109.12 ಪ್ರಗತಿ

ಪಲ್ಸ್ ಪೋಲಿಯೋ: ಕೊಡಗಿನಲ್ಲಿ ಗುರಿ ಮೀರಿದ ಸಾಧನೆ, ಶೇ.109.12 ಪ್ರಗತಿ

ಮಡಿಕೇರಿ, ಜೂನ್ 28: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ-2026ರ ಅಂಗವಾಗಿ ಬೀರ್ ದಿನವಾದ ಶನಿವಾರ ಕೊಡಗು ಜಿಲ್ಲೆಯಲ್ಲಿ ಒಟ್ಟು 31,657 ಮಕ್ಕಳಿಗೆ ಲಸಿಕೆ ನೀಡಿ ಶೇ.109.12 ಪ್ರಗತಿ ಸಾಧಿಸಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ 28,288 ಮಕ್ಕಳಿಗೆ ಲಸಿಕೆ ನೀಡಿ ಶೇ.107.30ರಷ್ಟು ಹಾಗೂ ನಗರ ಪ್ರದೇಶದಲ್ಲಿ 3,369 ಮಕ್ಕಳಿಗೆ ಲಸಿಕೆ ನೀಡಿ ಶೇ.127.7ರಷ್ಟು ಪ್ರಗತಿ ದಾಖಲಾಗಿದೆ.

*ತಾಲ್ಲೂಕುವಾರು ಪ್ರಗತಿ:*

1. *ಮಡಿಕೇರಿ ತಾಲ್ಲೂಕು*: 8,925 ಮಕ್ಕಳಿಗೆ ಲಸಿಕೆ - ಶೇ.113.2 ಪ್ರಗತಿ. ಗ್ರಾಮೀಣ 7,009 ಮಕ್ಕಳು ಶೇ.103.7, ನಗರ 1,916 ಮಕ್ಕಳು ಶೇ.170.8.

2. *ಸೋಮವಾರಪೇಟೆ ತಾಲ್ಲೂಕು*: 11,224 ಮಕ್ಕಳಿಗೆ ಲಸಿಕೆ - ಶೇ.111 ಪ್ರಗತಿ. ಗ್ರಾಮೀಣ 10,933 ಮಕ್ಕಳು ಶೇ.110.8, ನಗರ 291 ಮಕ್ಕಳು ಶೇ.121.3.

3. *ವಿರಾಜಪೇಟೆ ತಾಲ್ಲೂಕು*: 11,508 ಮಕ್ಕಳಿಗೆ ಲಸಿಕೆ - ಶೇ.104.5 ಪ್ರಗತಿ. ಗ್ರಾಮೀಣ 10,346 ಮಕ್ಕಳು ಶೇ.106.2, ನಗರ 1,162 ಮಕ್ಕಳು ಶೇ.91.1.

ಮನೆ-ಮನೆ ಭೇಟಿ ವೇಳೆ ಲಸಿಕೆಯಿಂದ ವಂಚಿತರಾದ 0-5 ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.