ಸೋಮವಾರಪೇಟೆಯಲ್ಲಿ ಪಲ್ಸ್ ಪೋಲಿಯೋಗೆ ಚಾಲನೆ: ಶಾಸಕ ಡಾ. ಮಂತರ್ ಗೌಡರಿಂದ ಮಕ್ಕಳಿಗೆ ಹನಿ

ಸೋಮವಾರಪೇಟೆಯಲ್ಲಿ ಪಲ್ಸ್ ಪೋಲಿಯೋಗೆ ಚಾಲನೆ: ಶಾಸಕ ಡಾ. ಮಂತರ್ ಗೌಡರಿಂದ ಮಕ್ಕಳಿಗೆ ಹನಿ

ಸೋಮವಾರಪೇಟೆ, ಜೂ. 26: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಸೋಮವಾರಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದರು.

ವೃತ್ತಿಯಲ್ಲಿ ವೈದ್ಯರಾಗಿರುವ ಶಾಸಕರು ಸ್ವತಃ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಿದರು. 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಷಕರು ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಈ ಸಂದರ್ಭದಲ್ಲಿ ಕರೆ ನೀಡಿದರು.