ಕೂಡುಮಂಗಳೂರಿನಲ್ಲಿ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ

ಕೂಡುಮಂಗಳೂರಿನಲ್ಲಿ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ

ಕುಶಾಲನಗರ: ಕೂಡುಮಂಗಳೂರು ಗ್ರಾಮ‌ ಪಂಚಾಯಿತಿಯ ಚಿಕ್ಕುತ್ತೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಲ್ಸ್ ಪೊಲೀಯೋ ಕಾರ್ಯಕ್ರಮ ನಡೆಯಿತು.

ಜೂ೨೮ರಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಲಸಿಕೆ ವಿತರಿಸುವ ಅಭಿಯಾನ ಪ್ರಾರಂಭಿಸಲಾಗಿದ್ದು, ಚಿಕ್ಕತ್ತೂರು ಶಾಲೆಯಲ್ಲಿ ಐದು ವರ್ಷದವರೆಗಿನ ನೂರಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ಹಾಕಲಾಯಿತು. ನಾಳೆಯಿಂದ ಮನೆಮನೆಗೆ ತೆರಳಿ ಪಲ್ಸ್ ಪೋಲಿಯೋ ಲಸಿಕೆ ಹಾಕಲಿದ್ದಾರೆ. ಚಿಕ್ಕತ್ತೂರು ಹಾಗೂ ಸುಂದರನಗರ ಗ್ರಾಮದ ಮಕ್ಕಳಿಗೆ ಚಿಕ್ಕತ್ತೂರು ಸರ್ಕಾರಿ ಶಾಲೆಯಲ್ಲಿ ಬೆಳಿಗ್ಗೆ ೮ ರಿಂದ ಸಂಜೆ ೫ ಗಂಟೆಯವರೆಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಯಿತು.

 ಸುಂದರನಗರ ವಾರ್ಡ್ ಮಾಜಿ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪೋಷಕರು ಐದು ವರ್ಷದವರೆಗಿನ ಎಲ್ಲಾ ಮಕ್ಕಳಿಗೆ ಫಲ್ಸ್ ಪೋಲೀಯೋ ಲಸಿಕೆಯನ್ನು ಖಡ್ಡಾಯವಾಗಿ ಹಾಕಿಸಬೇಕು ಎಂದು ಕರೆ ನೀಡಿದರು.‌ ಈ ಸಂದರ್ಭ ಸುಂದರನಗರ ಟಿ.ಎಚ್.ಒ ಸೌಮ್ಯ, ಅಂಗನವಾಡಿ ಶಿಕ್ಷಕಿ ಬೋಜಮ್ಮ, ಚಿಕ್ಕತ್ತೂರು ಅಂಗನವಾಡಿ ಶಿಕ್ಷಕಿ ಸುಶೀಲ, ಆಶಾ ಕಾರ್ಯಕರ್ತೆ ಸುಮಿತ್ರ, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಾದ ಸಫಾನ, ಫಾತಿಮತ್ ಸಜಿನಾ ಇದ್ದರು.