ಪುಂಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ:ಚೆಂಬೆಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾರ್ಯಾಚರಣೆ
admincoorgdaily

ಸಿದ್ದಾಪುರ:-ಕಾಡಾನೆ ಸೆರೆ ಕಾರ್ಯಾಚರಣೆಯ ಎರಡನೇ ದಿನವಾದ ಬುಧವಾರ ಅಂದಾಜು 35 ವರ್ಷ ಪ್ರಾಯದ ಪುಂಡಾನೆ ಅರಣ್ಯ ಇಲಾಖೆ ಸಿಬ್ಬಂದಿಗೆ ಬುಧವಾರ ಸೆರೆ ಸಿಕ್ಕಿದೆ
ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದುಬಾರೆ ಸಾಕಾನೆ ಶಿಬಿರದ ಆರು ಕುಮ್ಕಿ ಆನೆಗಳನ್ನು ಬಳಸಿಕೊಳ್ಳಲಾಯಿತು ಸುಮಾರು 120 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸೆರೆ ಸಿಕ್ಕ ಆನೆಯನ್ನು ದುಬಾರೆ ಸಾಕಾನೆ ಶಿಬಿರಕ್ಕೆ ಕಳುಹಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಈ ಪ್ರದೇಶದಲ್ಲಿ ಒಟ್ಟು ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಆದೇಶ ನೀಡಲಾಗಿದ್ದು, ಈವರೆಗೆ ಒಂದು ಆನೆಯನ್ನು ಸೆರೆ ಹಿಡಿಯಲಾಗಿದೆ ಒಂದು ದಿನದ ಬಿಡುವಿನ ಬಳಿಕ ಉಳಿದ ಎರಡು ಆನೆಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯ ನೇತೃತ್ವವನ್ನು ವಿರಾಜಪೇಟೆ ಡಿಎಫ್‌ಒ ವಿನೀತಾ ಜಿ. ಚೌಹಾಣ್, ಎಸಿಎಫ್ ತಹಸೀನ್ ಬಾನು, ಮಡಿಕೇರಿ ಡಿಎಫ್‌ಒ ಅಭಿಷೇಕ್ ಹಾಗೂ ವಲಯ ಅರಣ್ಯಾಧಿಕಾರಿ ಶ್ರೀರಾಮ್ ವಹಿಸಿದ್ದರು. ಪಶುವೈದ್ಯರಾದ ಮುಜೀಬ್ ಹಾಗೂ ಆದರ್ಶ್, ಶೂಟರ್‌ಗಳು, ಆರ್‌ಆರ್‌ಟಿ ಸಿಬ್ಬಂದಿ, ಆನೆ ಕಾರ್ಯಪಡೆ ಸಿಬ್ಬಂದಿ ಹಾಗೂ ದುಬಾರೆಯಿಂದ ಆಗಮಿಸಿದ್ದ ಮಾವುತರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಯಡೂರಿನಲ್ಲಿ ಕಾರ್ಮಿಕನನ್ನು ಬಲಿಪಡೆದಿದ್ದ ಅಂದಾಜು 35 ವರ್ಷದ ಗಂಡಾನೆಯನ್ನು ಎರಡು ದಿನಗಳ ಸತತ ಕಾರ್ಯಾಚರಣೆ ಬಳಿಕ ಚೆಂಬೆಬೆಳ್ಳೂರಿನಲ್ಲಿ ಸೆರೆ ಹಿಡಿಯಲಾಗಿದೆ ಸರ್ಕಾರದಿಂದ ಉಪಟಳ ನೀಡುತ್ತಿರುವ ಮೂರು ಆನೆಗಳನ್ನು ಸೆರೆ ಹಿಡಿಯಲು ಆದೇಶ ಬಂದಿದ್ದು, ಉಳಿದ ಎರಡು ಪುಂಡಾನೆಗಳನ್ನು ಒಂದು ದಿನದ ವಿಶ್ರಾಂತಿಯ ಬಳಿಕ ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರಿಸಲಾಗುವುದು .
ವಿರಾಜಪೇಟೆ ಡಿಎಫ್‌ಒ ವಿನೀತಾ ಜಿ. ಚೌಹಾಣ್