ಕೊಡಗಿನಲ್ಲಿ ನಿಯಂತ್ರಣ ತಪ್ಪಿ ಬೆಳೆಯುತ್ತಿರುವ ರೆಸಾರ್ಟ್ ಸಂಸ್ಕೃತಿಗೆ ಕಡಿವಾಣ ಹಾಕಿ:ಸಿಎನ್ಸಿ ಆಗ್ರಹ

Jun 23, 2026 - 17:41
 0  195
ಕೊಡಗಿನಲ್ಲಿ ನಿಯಂತ್ರಣ ತಪ್ಪಿ ಬೆಳೆಯುತ್ತಿರುವ ರೆಸಾರ್ಟ್ ಸಂಸ್ಕೃತಿಗೆ ಕಡಿವಾಣ ಹಾಕಿ:ಸಿಎನ್ಸಿ ಆಗ್ರಹ

ಮಡಿಕೇರಿ: ಕೊಡಗಿನಲ್ಲಿ ನಿಯಂತ್ರಣ ತಪ್ಪಿ ಬೆಳೆಯುತ್ತಿರುವ ರೆಸಾರ್ಟ್ ಸಂಸ್ಕೃತಿಗೆ ಕಡಿವಾಣ ಹಾಕಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಆಗ್ರಹಿಸಿದೆ. ಜಿಲ್ಲೆಯ 300 ಗ್ರಾಮಗಳಲ್ಲಿ ಸುಮಾರು 3 ಸಾವಿರ ರೆಸಾರ್ಟ್‌ಗಳು ತಲೆಎತ್ತಿದ್ದು, ಇದರಿಂದ ಕೊಡಗಿನ ಪರಿಸರ, ಜಲಮೂಲ ಹಾಗೂ ಸಾಂಸ್ಕೃತಿಕ ಅಸ್ಮಿತೆಗೆ ಅಪಾಯ ಎದುರಾಗಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಆತಂಕ ವ್ಯಕ್ತಪಡಿಸಿದರು.

ಪ್ರವಾಸಿಗರಿಗಾಗಿ ಮಿತಿಮೀರಿ ನೀರು ಬಳಸುತ್ತಿದ್ದರೆ, ಸ್ಥಳೀಯರಿಗೆ ಆಡಳಿತ ಆಕ್ಷೇಪ ವ್ಯಕ್ತಪಡಿಸುತ್ತಿದೆ ಎಂದು ಅವರು ದೂರಿದರು. ರಾಜಕಾರಣಿಗಳು, ಕಪ್ಪುಹಣ ಹೊಂದಿರುವವರು ಸೇರಿ ಹೊರಗಿನವರು ಭೂಖರೀದಿಯಲ್ಲಿ ತೊಡಗಿದ್ದು, ಹಣಕ್ಕಾಗಿ ನಿಯಮ ಮೀರಿ ಭೂಪರಿವರ್ತನೆ ನಡೆಯುತ್ತಿದೆ ಎಂದು ಆರೋಪಿಸಿದರು.ಈ ಹಿನ್ನೆಲೆಯಲ್ಲಿ ಜೂ.26ರಂದು ಕ್ಯಾಪಿಟಲ್ ವಿಲೇಜ್‌ನಲ್ಲಿ ಕಾನೂನು ತಜ್ಞರ ವಿಚಾರಗೋಷ್ಠಿ ಆಯೋಜಿಸಲಾಗಿದೆ. ಕೊಡವರ ಹಕ್ಕುಗಳ ರಕ್ಷಣೆ, ಭೂ-ಸ್ವಾಯತ್ತತೆ ಬಗ್ಗೆ ಸುಪ್ರೀಂ ಕೋರ್ಟ್ ವಕೀಲ ವಿಕ್ರಮ್ ಹೆಗಡೆ ಹಾಗೂ ಹಿಮಾ ಲಾರೆನ್ಸ್ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0