ಜೋಳದ ಹೊಲದಲ್ಲಿದ್ದ ಹೆಬ್ಬಾವು ಸೆರೆ

Aug 8, 2026 - 17:15
 0  524
ಜೋಳದ ಹೊಲದಲ್ಲಿದ್ದ ಹೆಬ್ಬಾವು ಸೆರೆ

ಕುಶಾಲನಗರ, ಆ.8 : ಕುಶಾಲನಗರದ ಗಡಿಭಾಗವಾದ ಆವರ್ತಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಜೋಳದ ಹೊಲದಲ್ಲಿದ್ದ ಸುಮಾರು 11 ರಿಂದ 12 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ.

 ಶನಿವಾರ ಬೆಳಿಗ್ಗೆ 7.30ಕ್ಕೆ ಆವರ್ತಿ ಗ್ರಾಮದ ಕಾಲುವೆ ಪಕ್ಕದ ಯೋಗಣ್ಣನವರ ಜಮೀನಿಗೆ ಜೋಳದ ಕಡ್ಡಿ ಮುರಿಯಲು ಬಂದ ಕಾರ್ಮಿಕರು ಸ್ಥಳದಲ್ಲಿದ್ದ ಹೆಬ್ಬಾವನ್ನು ಗುರುತಿಸಿದ್ದಾರೆ. ಮಾಹಿತಿ ತಿಳಿದು ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ಸಹಕಾರದಿಂದ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. ಅನತಿ ದೂರದಲ್ಲಿ ಕಾವೇರಿ ನದಿ ಇದ್ದು ಹೆಬ್ಬಾವು ಅಲ್ಲಿಂದ ಬಂದಿರುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ವರದಿ: ಶ್ರೀಧರ್ ನಾರಾಯಣ್

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0