ಸದ್ದಿಲ್ಲದೆ 2ನೇ ಮದುವೆ: ತಾಳಿ ಕಟ್ಟೋ ಟೈಮಿಗೆ ಮೊದಲ ಹೆಂಡ್ತಿ ಎಂಟ್ರಿ, ಮುಂದೇನಾಯ್ತು ಗೊತ್ತೇ!

Mar 25, 2026 - 19:15
 0  1.5k
ಸದ್ದಿಲ್ಲದೆ 2ನೇ ಮದುವೆ: ತಾಳಿ ಕಟ್ಟೋ ಟೈಮಿಗೆ ಮೊದಲ ಹೆಂಡ್ತಿ ಎಂಟ್ರಿ, ಮುಂದೇನಾಯ್ತು ಗೊತ್ತೇ!
Photo credit: TV09 (ಮೊದಲ ಮದುವೆಯ ಫೋಟೋ)

ಬೆಂಗಳೂರು (ಮಾರ್ಚ್ 25): ಮೊದಲ ಹೆಂಡ್ತಿ ಬದುಕಿರುವಾಗಲೇ, ವಿಚ್ಛೇದನವನ್ನೂ ಕೊಡದೆ ಎರಡನೇ ಮದುವೆಯಾಗಲು (Second Marriage) ಹೋಗಿದ್ದ ಪತಿರಾಯನಿಗೆ ಮೊದಲ ಪತ್ನಿ ಮಂಟಪದಲ್ಲೇ ಶಾಕ್ ಕೊಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ (Kodagurki Village) ಮುನೇಶ್ವರ ದೇಗುಲದ ಬಳಿ ಸುರೇಶ್ ಎಂಬಾತ ಕದ್ದು ಮುಚ್ಚಿ ಎರಡನೇ ಮದುವೆಯಾಗುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಹೌದು…ವಿಚ್ಚೇದನ ನೀಡದೆ ಮತ್ತೊಂದು ವಿವಾಹವಾಗುತ್ತಿರುವ ವಿಚಾರ ತಿಳಿದು ಮೊದಲ ಪತ್ನಿ ಪೊಲೀಸರ ಜೊತೆಯಲ್ಲೇ ಆಗಮಿಸಿ ಮದುವೆ ನಿಲ್ಲಿಸಿದ್ದಾಳೆ.

19 ವರ್ಷಗಳ ಹಿಂದೆಯೇ ಚಿಕ್ಕಬಳ್ಳಾಪುರ ಮಂಚೇನಹಳ್ಳಿ ಗ್ರಾಮದ ನಾಗಮಣಿ ಎಂಬಾಕೆಯನ್ನ ಆಂಧ್ರ ಮೂಲದ ಕದರಿ ಎಂಬ ಗ್ರಾಮಕ್ಕೆ ಸೇರಿದ್ದ ಸುರೇಶ್ ಮದುವೆಯಾಗಿದ್ದ. ಈ ದಂಪತಿ ಇಬ್ಬರು ಮಕ್ಕಳು ಕೂಡ ಇದ್ದಾರಂತೆ. ಮದುವೆಯಾಗಿ ಹತ್ತಾರು ವರ್ಷ ಸಂಸಾರ ಮಾಡಿದ ಸುರೇಶ್ ಮೊದಲ ಪತ್ನಿಯನ್ನ ಬಿಟ್ಟು 2ನೇ ಮದುವೆಯಾಗಲು ಮುಂದಾಗಿದ್ದ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಮುನೇಶ್ವರ ದೇಗುಲದ ಬಳಿ ಸುರೇಶ್ ಎಂಬಾತನ ಎರಡನೇ ಮದುವೆ ಕೂಡ ನಡೆದಿತ್ತು. ಇನ್ನೇನು ತಾಳಿ ಕಟ್ಟೋ ಸಮಯಕ್ಕೆ ಸರಿಯಾಗಿ ಬಂದ ನಾಗಮಣಿ ಮದುವೆ ನಿಲ್ಲಿಸಿದ್ದಾರೆ.

ಇನ್ನೂ ಪೊಲೀಸರ ಸಮೇತ ಮೊದಲ ಪತ್ನಿ ಎಂಟ್ರಿಕೊಡುತ್ತಿದ್ದಂತೆಯೇ ಗಂಡ ಕಕ್ಕಾಬಿಕ್ಕಿಯಾಗಿದ್ದಾರೆ. ಮೊದಲನೆ ಪತ್ನಿಗೆ ವಿಚ್ಚೇಧನ ನೀಡದೆ ಎರಡನೆ ಮದುವೆಯಾಗುವುದು ತಪ್ಪು ಎಂದು ಬುದ್ದಿವಾದ ಹೇಳಿದ್ದು ಮದುವೆಯನ್ನ ನಿಲ್ಲಿಸಿದ್ದು, ಸಿಂಗಾರಗೊಂಡು ಮದುವೆಗೆ ಸಿದ್ದವಾಗಿ ಕುಳಿತಿದ್ದ ಸುರೇಶ್ ನನ್ನ ಪೊಲೀಸರ ವಶಕ್ಕೆ ಪಡೆದಿದ್ದಾರೆ. 

What's Your Reaction?

Like Like 2
Dislike Dislike 0
Love Love 1
Funny Funny 2
Angry Angry 2
Sad Sad 1
Wow Wow 3