ಚೇನಂಡ ಕೊಡವ ಕೌಟುಂಬಿಕ ಹಾಕಿ ಫೈನಲ್ಸ್ ಗೆ ರಾಜ್ಯ ಸಭಾ ಸದಸ್ಯ ಅಜಯ್ ಮಖಾನ್

Feb 9, 2026 - 18:29
 0  271
ಚೇನಂಡ ಕೊಡವ ಕೌಟುಂಬಿಕ ಹಾಕಿ ಫೈನಲ್ಸ್ ಗೆ ರಾಜ್ಯ ಸಭಾ ಸದಸ್ಯ ಅಜಯ್ ಮಖಾನ್

ಮಡಿಕೇರಿ ಫೆ.10 - ನವ ದೆಹಲಿಯಲ್ಲಿ ರಾಜ್ಯ ಸಭಾ ಸದಸ್ಯ ಅಜಯ್ ಮಖಾನ್ ಅವರನ್ನು ಭೇಟಿಯಾದ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಪ್ರಮುಖರು ಪೈನಲ್ ಪಂದ್ಯಾಟಕ್ಕೆ ಸಂಸದರನ್ನು ಆಹ್ವಾನಿಸಿದರು.

10 ವಷ೯ಗಳ ಹಿಂದೆಯೇ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಉದ್ದೇಶವನ್ನು ಶ್ಲಾಘಿಸಿ ಕೊಡಗಿನಲ್ಲಿ ಕ್ರೀಡೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದನ್ನು ಸ್ಮರಿಸಿಕೊಂಡ ಅಜಯ್ ಮಖಾನ್. ಈ ಬಾರಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಬರಲು ಸಮ್ಮತಿ ಸೂಚಿಸಿದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ಸಹಕಾರದಲ್ಲಿ ರಾಜ್ಯ ಸಭಾ ಸದಸ್ಯ ಅಜಯ್ ಮಖಾನ್ ಅವರನ್ನು ನವದೆಹಲಿಯಲ್ಲಿ ಚೇನಂಡ ಕುಟುಂಬಸ್ಥರ ನಿಯೋಗ ಭೇಟಿ ಮಾಡಿತ್ತು. .

ನಿಯೋಗದಲ್ಲಿ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಸಮಿತಿ ಅಧ್ಯಕ್ಷರಾದ ಕರುಂಬಯ್ಯ ಸಿ.ಪಿ. ಕಾಯಾ೯ಧ್ಯಕ್ಷ ದೀನಾ ಚೇನಂಡ , ವಿವೇಕ್ ಪೂಣಚ್ಚ, ಬ್ರಿಗೇಡಿಯರ್ ಸಿ.ಎನ್. ಚೀಯಣ್ಣ, ದ್ರೋಣಾಚಾಯ೯ ಪ್ರಶಸ್ತಿ ವಿಜೇತರಾದ ವಿಶುಕುಟ್ಟಪ್ಪ, ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0