ಮಾ.26ಕ್ಕೆ ಶ್ರೀ ವಿನಾಯಕ ಸೇವಾ ಟ್ರಸ್ಟ್‌ ವತಿಯಿಂದ ರಾಮನವಮಿ, ವಾರ್ಷಿಕ ಮಹಾಸಭೆ

Mar 23, 2026 - 09:03
 0  56
ಮಾ.26ಕ್ಕೆ  ಶ್ರೀ ವಿನಾಯಕ ಸೇವಾ ಟ್ರಸ್ಟ್‌ ವತಿಯಿಂದ ರಾಮನವಮಿ, ವಾರ್ಷಿಕ ಮಹಾಸಭೆ
ಟ್ರಸ್ಟ್ ಲೋಗೋ

ಮಡಿಕೇರಿ : ಶ್ರೀ ವಿನಾಯಕ ಸೇವಾ ಟ್ರಸ್ಟ್‌ ಕತ್ತಲೆಕಾಡು-ಜೇನುಕೊಲ್ಲಿ ವತಿಯಿಂದ ಶ್ರೀರಾಮನವಮಿ ಆಚರಣೆ ಹಾಗೂ ಟ್ರಸ್ಟ್‌ನ 2025-26 ವಾರ್ಷಿಕ ಮಹಾಸಭೆ ಮಾರ್ಚ್‌ 26ರಂದು ನಡೆಯಲಿದೆ.

ಟ್ರಸ್ಟ್‌ಗೆ ನೂತನವಾಗಿ ಖರೀದಿಸಿರುವ ಜಾಗದ ಆವರಣದಲ್ಲಿ ಅಂದು ಬೆಳಗ್ಗೆ 9 ಗಂಟೆಗೆ ಬ್ರಹ್ಮಶ್ರೀ ವೇದಮೂರ್ತಿ ಗಿರೀಶ್ ತಂತ್ರಿ ಅವರ ನೇತೃತ್ವದಲ್ಲಿ ಗಣಹೋಮ, ಬಳಿಕ ದುರ್ಗಾ ಹೋಮ, 11 ಗಂಟೆಗೆ ಶ್ರೀರಾಮನವಿ ಪ್ರಯುಕ್ತ ವಿಶೇಷ ಪೂಜೆ, ಶ್ರೀರಾಮನಿಗೆ ಆರತಿ ನೆರವೇರಲಿದೆ. ನಂತರ ಟ್ರಸ್ಟ್‌ನ ಭಜನಾ ತಂಡದಿಂದ ಭಜನೆ, ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಕಾರ್ಯದರ್ಶಿ ಬ್ರಿಜೇಶ್‌ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಧ್ಯಾಹ್ನ 02 ಗಂಟೆಗೆ ಟ್ರಸ್ಟ್‌ ಅಧ್ಯಕ್ಷ ಹೊನ್ನಪ್ಪ ಆಚಾರ್ಯ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಲಿದೆ.

ಮುಖ್ಯ ಅತಿಥಿಯಾಗಿ ಮಡಿಕೇರಿಯ ಶ್ರೀರಾಮಾಂಜನೇಯ ಭಜನಾ ಮಂಡಳಿಯ ಪ್ರಮುಖರಾದ ಕೆ.ಕೆ. ಮಹೇಶ್‌ ಕುಮಾರ್‌ ಪಾಲ್ಗೊಳ್ಳಲಿದ್ದಾರೆ. ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಇದೇ ವೇಳೆ ಸನ್ಮಾನಿಸಲಾಗುವುದೆಂದು ಮಾಹಿತಿ ನೀಡಿದ್ದಾರೆ. ರಾಮನವಮಿ ಪ್ರಯುಕ್ತ ಮಕ್ಕಳಿಗೆ ಶ್ರೀರಾಮ, ಸೀತೆಯ ವೇಷ ಧರಿಸಿ ಕಾರ್ಯಕ್ರಮಕ್ಕೆ ಕರೆತರುವ ಮೂಲಕ ವಿಶೇಷ ಮೆರುಗು ನೀಡಬಹುದು. ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ಚಂದವಾಗಿ ಅಲಂಕರಿಸಿ ಸಂಭ್ರಮದಲ್ಲಿ ಭಾಗಿಯಾಗಿಸಲು ಅವಕಾಶ ಕಲ್ಪಿಸಲಾಗಿದೆ. ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಪ್ರಶಂಸನಾ ಪತ್ರ ನೀಡಲಾಗುವುದು ಎಂದು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0