ಪಡಿತರ ಚೀಟಿದಾರರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಲು ಸೂಚನೆ
admincoorgdaily

ಸೋಮವಾರಪೇಟೆ:ಅರ್ಹ ಪಡಿತರ ಚೀಟಿದಾರರ ಇ-ಕೆವೈಸಿಯನ್ನು 5 ವರ್ಷಕೊಮ್ಮೆ ಮಾಡಬೇಕಿದ್ದು, ಸೆ.30ರ ಒಳಗೆ ಇ-ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳುವಂತೆ ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈಗಾಗಲೇ 5 ವರ್ಷಗಳು ಪೂರ್ಣಗೊಂಡಿರುವ ಆರ್ಹ ಪಡಿತರ ಪಟ್ಟಿಯನ್ನು ಅವರ ವ್ಯಾಪ್ತಿಯ ನ್ಯಾಯಬೆಲೆಗಳಿಗೆ ಕಳುಹಿಸಲಾಗಿದೆ. ಪಡಿತರ ಚೀಟಿದಾರರು ಕುಟುಂಬ ಸದಸ್ಯರೊಂದಿಗೆ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸಬೇಕು.