ರೀಮಾ ಕೆ.ಬಿ. ಅವರಿಗೆ ಪಿಎಚ್.ಡಿ‌ ಪದವಿ

Apr 1, 2026 - 20:28
 0  616
ರೀಮಾ ಕೆ.ಬಿ. ಅವರಿಗೆ ಪಿಎಚ್.ಡಿ‌ ಪದವಿ

ಮಡಿಕೇರಿ;ಕೊಡಗು ಭಾಗಮಂಡಲ ಮೂಲದ ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ರೀಮಾ ಕೆ.ಬಿ. ಅವರು ಮಂಡಿಸಿದ "ಗ್ರೋಥ್ & ಕ್ಯಾರೆಕ್ಟರೈಷೇಶನ್ ಆಫ್ ಡೈವೆಲೆಂಟ್ ಕ್ಯಾಟ್ಅಯಾನ್ಸ್ ಡೋಪ್ಡ್ ಟಾಟ್ರೇಟ್ ಸಿಂಗಲ್ ಕ್ರಿಸ್ಟಲ್ಸ್ " ವಿಷಯಕ್ಕೆ ಮಂಗಳೂರು ವಿವಿಯಿಂದ ಪಿಹೆಚ್ ಡಿ ಪದವಿ ಲಭಿಸಿದೆ.

ಪ್ರಸ್ತುತ ರೀಮಾ ಅವರು ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಮಂಗಳೂರು ವಿವಿ ಕಾಲೇಜು ಭೌತಶಾಸ್ತ್ರ ಪ್ರಾಧ್ಯಾಪಕ ಡಾ. ಜಗನ್ನಾಥ ನೆತ್ತಾರ್ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದರು.

 ನಿವೃತ್ತ ಉಪ ತಹಶೀಲ್ದಾರ್ ಕೆದಂಬಾಡಿ ಬಾಲಕೃಷ್ಣ ಕೆ.ಎಸ್, ನಿವೃತ್ತ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಸಾವಿತ್ರಿ ಎಸ್. ಯು ರವರ ಪುತ್ರಿ. ಉಪ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನಹಿತ್ಲು ದಿವಂಗತ ಜಯಪ್ರಕಾಶ್ ಕೆ.ಡಿ ಅವರ ಧರ್ಮಪತ್ನಿಯಾಗಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1