ಶೈಖುನಾ ಆಲಿಕುಟ್ಟಿ ಮುಸ್ಲಿಯಾರ್ ಅನುಸ್ಮರಣೆ: ಗೋಣಿಕೊಪ್ಪದಲ್ಲಿ ಪ್ರಾರ್ಥನಾ ಸಂಗಮ"
ಗೋಣಿಕೊಪ್ಪ:ಶೈಖುನಾ ಪ್ರೊಫೆಸರ್ ಆಲಿಕುಟ್ಟಿ ಮುಸ್ಲಿಯಾರ್ ಅವರ ಅನುಸ್ಮರಣೆ ಹಾಗೂ ಪ್ರಾರ್ಥನಾ ಸಂಗಮ ಕಾರ್ಯಕ್ರಮವು SKSBV ವತಿಯಿಂದ ಗೋಣಿಕೊಪ್ಪ ನೂರುಲ್ ಹುದಾ ಮದರಸಾ ಆವರಣದಲ್ಲಿ ನಡೆಯಿತು.
ಮಹಲ್ ಅಧ್ಯಕ್ಷ ಅಬ್ದುಲ್ ನಾಸರ್ ಅಧ್ಯಕ್ಷತೆ ವಹಿಸಿದ್ದರು. ಮದರಸಾ ಪ್ರಾಂಶುಪಾಲ ರಿಯಾಜ್ ಬಾಖವಿ ಅನುಸ್ಮರಣಾ ಭಾಷಣ ಮಾಡಿದರು. ಉಸ್ತಾದ್ ಅವರ ಜೀವನ ಶೈಲಿ ಹಾಗೂ ಅವರು ಸಮುದಾಯಕ್ಕೆ ಸಲ್ಲಿಸಿದ ಸೇವೆಯನ್ನು ಅವರು ವಿವರಿಸಿದರು.
ಸಭೆಯಲ್ಲಿ MC ಅಶ್ರಫ್ ಮುಸ್ಲಿಯಾರ್, ಆಡಳಿತ ಮಂಡಳಿ ಉಪಾಧ್ಯಕ್ಷ ಅಬ್ದುಲ್ ರಶೀದ್, ಮಜೀದ್ ಬಾಖವಿ, ಮುಜೀಬ್ ಅಝ್ಹರಿ, ಅಜೀಝ್ ಬಾಖವಿ, ಸಹದ್ ಫೈಝಿ, ಜುಬೈರ್ ಫೈಝಿ, ಶಫೀಕ್ ದಾರಿಮಿ ಮತ್ತಿತರರು ಉಪಸ್ಥಿತರಿದ್ದರು. -
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
