Kodagu

ಮೀಸಲಾತಿ ರಕ್ಷಣೆ ರಾಜಕೀಯದ ವಿಷಯವಲ್ಲ, 4ಕೋಟಿ ಜನರ ಬದುಕಿನ ಪ್ರಶ್ನೆ: ಮಾಜಿ ಸಂಸದ ವಿ.ಎಸ್.ಉಗ್ರಪ್ಪ

admincoorgdaily

ಮೀಸಲಾತಿ ರಕ್ಷಣೆ ರಾಜಕೀಯದ ವಿಷಯವಲ್ಲ, 4ಕೋಟಿ ಜನರ ಬದುಕಿನ ಪ್ರಶ್ನೆ: ಮಾಜಿ ಸಂಸದ ವಿ.ಎಸ್.ಉಗ್ರಪ್ಪ

ಮಡಿಕೇರಿ: ಮೀಸಲಾತಿ ರಕ್ಷಣೆ ರಾಜಕೀಯದ ವಿಷಯವಲ್ಲ. ಅದು ೪ ಕೋಟಿ ಜನರ ಬದುಕಿನ ಪ್ರಶ್ನೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

ತಮಿಳುನಾಡು ಶೇ.೬೯ ಮೀಸಲಾತಿಗೆ ೯ನೇ ಪರಿಚ್ಛೇದ ರಕ್ಷಣೆ ಪಡೆದಂತೆ, ಕರ್ನಾಟಕದ ಶೇ.೫೬ ಮೀಸಲಾತಿಗೂ ಅದೇ ಮಾದರಿ ಅನುಸರಿಸಬೇಕು ಎಂದು ಒತ್ತಾಯಿಸಿದರು. ೨೦೨೨ರಲ್ಲಿ ಬೊಮ್ಮಾಯಿ ಸರ್ಕಾರ ಎಸ್‌ಸಿ ಮೀಸಲಾತಿಯನ್ನು ಶೇ.೧೭ಕ್ಕೆ, ಎಸ್‌ಟಿ ಮೀಸಲಾತಿಯನ್ನು ಶೇ.೭ಕ್ಕೆ ಹೆಚ್ಚಿಸಿತ್ತು. ಆದರೆ, ಕೇಂದ್ರಕ್ಕೆ ಕಳುಹಿಸಿದ ಪ್ರಸ್ತಾವನೆಗೆ ಇಂದಿಗೂ ಉತ್ತರವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯದ ೨೫% ಜನಸಂಖ್ಯೆ ಹೊಂದಿರುವ ಎಸ್‌ಸಿ/ಎಸ್‌ಟಿ ಸಮುದಾಯಗಳ ಹಕ್ಕು ರಕ್ಷಣೆಗೆ ಬಿಜೆಪಿ ಸಂಸದರು, ಕೇಂದ್ರ ಸಚಿವರು ಮೌನ ಮುರಿಯಬೇಕು.

ಜತೆಗೆ ಈ ಕುರಿತು ಸಿಎಂ ಡಿ.ಕೆ.ಶಿವಕುಮಾರ್ ಅವರು, ಸರ್ವಪಕ್ಷ ಸಭೆ ಕರೆದು, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ನಿಯೋಗ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು. ಮೀಸಲಾತಿ ಭಿಕ್ಷೆಯಲ್ಲ, ಸಂವಿಧಾನ ನೀಡಿದ ಹಕ್ಕು. ಅದನ್ನು ರಕ್ಷಿಸಲು ಎಲ್ಲರೂ ಒಂದಾಗಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಜಯಶ್ರೀ, ಎಂ.ನರಸಿಂಹಯ್ಯ, ಸಿದ್ದಪ್ಪ, ರಾಜಪ್ಪ, ಅಶೋಕ್ ಇದ್ದರು.