Kodagu

ಬೆಟ್ಟಗೇರಿ ಶಾಲೆಯಲ್ಲಿ ಹಿರಿಯರಿಗೆ ಗೌರವ ನಮನ: ಹಿರಿಯರ ಮಹತ್ವ ತಿಳಿಸುವ ಕಾಯ೯ಕ್ರಮಗಳು ಅಗತ್ಯ- ಕೆ.ಎಸ್. ಪುಟ್ಟಯ್ಯ

admincoorgdaily

ಬೆಟ್ಟಗೇರಿ  ಶಾಲೆಯಲ್ಲಿ   ಹಿರಿಯರಿಗೆ ಗೌರವ ನಮನ: ಹಿರಿಯರ ಮಹತ್ವ ತಿಳಿಸುವ ಕಾಯ೯ಕ್ರಮಗಳು ಅಗತ್ಯ- ಕೆ.ಎಸ್. ಪುಟ್ಟಯ್ಯ

ಮಡಿಕೇರಿ ಆ.22- ಹಿರಿಯರನ್ನು ಗುರುತಿಸಿ, ಗೌರವಿಸುವಂಥ ಕಾಯ೯ಕ್ರಮಗಳು ಸಮಾಜದ ಜನತೆಗೆ, ವಿದ್ಯಾಥಿ೯ಗಳಿಗೆ ಹಿರಿಯರ ಅಗತ್ಯವನ್ನು ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬೆಟ್ಟಗೇರಿ ಸಕಾ೯ರಿ ಶಾಲೆಯ ನಿವೖತ್ತ ಮುಖ್ಯೋಪಾದ್ಯಾಯ ಕೆ.ಎಸ್. ಪುಟ್ಟಯ್ಯ ಶ್ಲಾಘಿಸಿದರು.

ಬೆಟ್ಟಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಹಿನ್ನಲೆ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಯ ಈ ಕಾರ್ಯಕ್ರಮವನ್ನು ಅದ್ಭುತ ಕಾರ್ಯಕ್ರಮ ಎಂದು ಬಣ್ಣಿಸಿದ ಪುಟ್ಟಯ್ಯ, ಇಂತಹ ಕಾರ್ಯಕ್ರಮವು ಖಂಡಿತವಾಗಿಯೂ ಹಿರಿಯರ ಗೌರವ ಸ್ಥಾನಮಾನ ಹೆಚ್ಚಾಗಿ ಅವರು ಅನುಭವಿಸುತ್ತಿರುವ ಕಷ್ಟ ಹಾಗೂ ತೊಂದರೆಗಳಿಗೆ ಪರಿಹಾರ ಸಿಗುತ್ತದೆ ಇದರಿಂದಾಗಿ ಮಕ್ಕಳ ಮನೋಭಾವವು ನಿಚ್ಚಳವಾಗಿ ಬದಲಾಗಿ ಉತ್ತಮ ಸಮಾಜವನ್ನು ಸೃಷ್ಟಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ವೃದ್ರಾಶ್ರಮಗಳ ಬಗ್ಗೆ ಕೆ.ಎಸ್ ಪುಟಯ್ಯ , ಬೇಸರ ವ್ಯಕ್ತಪಡಿಸಿದರು.

ಶಾಲೆಯ ಹಳೆ ವಿದ್ಯಾರ್ಥಿ, ಖ್ಯಾತ ಕ್ರೀಡಾಪಟು ಹಾಗೂ ಕಾಫಿ ಬೆಳೆಗಾರ ಬಿ ಎಂ ಜಗದೀಶ್ ರೈ ಸನ್ಮಾನ ಸ್ವೀಕರಿಸಿ ಮಾತನಾಡಿ, ,ಸಮಾಜದಲ್ಲಿ ಹಿರಿಯರ ಅವಶ್ಯಕತೆ ಬಗ್ಗೆ ವಿವರಿಸಿದರು.

 ಸನ್ಮಾನಿತರಾದ ಕಾಫಿ ಬೆಳೆಗಾರ ಎಂ. ಜಿ ರಮೇಶ್ ಮಾತನಾಡಿ, ಪ್ರತಿಯೊಬ್ಬರೂ ಕೂಡ ವಯಸ್ಕರಾಗುತ್ತಾರೆ. ವಯಸ್ಕರ ಅನುಭವಗಳನ್ನು ಈಗಿನ ಪೀಳಿಗೆಗಳು ಪಡೆದುಕೊಂಡರೆ ಅವರ ಮುಂದಿನ ಜೀವನವೂ ಸುಗಮವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ರೋಟರಿ ಮಿಸ್ಟಿ ಹಿಲ್ಸ್ ಸದಸ್ಯ ಹೇಮಾ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದಿನ ಕಾಲದಲ್ಲಿ ಹಿರಿಯರ ಜವಾಬ್ದಾರಿ ಕುಟುಂಬದಲ್ಲಿ ಅವರಿಗಿದ್ದ ಸ್ಥಾನಮಾನ , ಪ್ರಸ್ತುತ ಸ್ಥಿತಿಯಲ್ಲಿ ವಯಸ್ಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು , ಇಂದಿನ ಮಕ್ಕಳ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು.

 ರೋಟರಿ ಮಿಸ್ಟಿ ಹಿಲ್ಸ್ ಮಾಜಿ ಕಾಯ೯ದಶಿ೯ ಸತೀಶ್ ಸೋಮಣ್ಣ ಮಾತನಾಡಿ, ಹಿರಿಯ ನಾಗರಿಕರನ್ನು ಗೌರವಿಸುವುದು ಪ್ರತೀಯೋವ೯ರ ಕತ೯ವ್ಯವಾಗಬೇಕೆಂದು ಕರೆ ನೀಡಿದರು.

   ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿ ಮಜೀದ್, ತಳೂರು ದಿನೇಶ್, ವಿ.ಟಿ ಗಿರೀಶ್, ಹೊಸೂರು ಗಿರೀಶ್, ಬೊಳ್ಳಿಯಂಡ ಮಂಜು ತೆನ್ನೀರ ರಮೇಶ್, ಶಿಕ್ಷಕಿಯರಾದ ಅನಿತಾ ಬಿಬಿ ಹಾಗೂ ಸವಿ ರು ಹಿರಿಯರ ಅವಶ್ಯಕತೆ ಬಗ್ಗೆ ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಲವ ವಹಿಸಿ, ವಿದ್ಯಾರ್ಥಿ ಕಿಶನ್ ಪ್ರಾರ್ಥಿಸಿ ಶಿಕ್ಷಕಿ ಅನಿತಾ ಬಿವಿ ವಂದಿಸಿದರು. ಹೇಮಕುಮಾರ್ ನಿರೂಪಿಸಿದರು.