ಚೆನ್ನಮ್ಮ ಕಾಲೇಜಿನಲ್ಲಿ ಹಿರಿಯರಿಗೆ ಗೌರವ ನಮನ

Aug 24, 2026 - 01:44
 0  1
ಚೆನ್ನಮ್ಮ ಕಾಲೇಜಿನಲ್ಲಿ ಹಿರಿಯರಿಗೆ ಗೌರವ ನಮನ

ಮಡಿಕೇರಿ: ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹಿರಿಯ ಜೀವಿಗಳಿಗೆ ಗೌರವ ನಮನ ಕಾಯ೯ಕ್ರಮ ಆಯೋಜಿತವಾಗಿತ್ತು.

 ಹಿರಿಯ ನಾಗರಿಕರಾದ ವೇದಾವತಿ , ಕೊರನ ವಿಶ್ವನಾಥ್,ನಿವೃತ್ತ ಶಿಕ್ಷಕ ಪಿ ಕೆ ಸೋಮಯ್ಯ ಅವರನ್ನು ಈ ಸಂದಭ೯ ಸನ್ಮಾನಿಸಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕ ಜಗದೀಶ್ ಪ್ರಶಾಂತ್ ಹಿರಿಯರ ದಿನದ ಮಹತ್ವ ವಿವರಿಸಿದರು. ಹಿರಿಯರು ಚೆನ್ನಾಗಿದ್ದರೆ ಮಾತ್ರ ಅಂಥ ಸಮಾಜ ಸುಖಿ, ಸಮೖದ್ದಿಯನ್ನು ಹೊಂದಿರುತ್ತದೆ ಎಂದೂ ಅವರು ಅಭಿಪ್ರಾಯಪಟ್ಟರು.

ಕಾಲೇಜು ಪ್ರಾಂಶುಪಾಲ ಮಂದಪ್ಪ ಅವರು ಮಾತನಾಡಿ, ಭಾರತೀಯ ಸಮಾಜದ ಭಾಗವಾಗಿದ್ದ ಅವಿಭಕ್ತ ಕುಟುಂಬವು ಇಂದು ಕಣ್ಮರೆಯಾಗಿದ್ದು ಇದರ ಪರಿಣಾಮ ಈ ಹಿಂದೆ ಹಿರಿಯ ನಾಗರಿಕರಿಗೆ ಸಿಗುತ್ತಿದ್ದ ರಕ್ಷಣೆ ಮತ್ತು ಪೋಷಣೆ ಕಡಿಮೆಯಾಗುತ್ತಿದೆ. ದೇಶದಲ್ಲಿ ವೃದ್ದಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿಯಾದ ವಿಚಾರವಾಗಿದೆ ಎಂದರು.

 ಪ್ರತಿಯೊಬ್ಬರೂ ಹಿರಿಯರ ಮಾರ್ಗದರ್ಶನ ಹಾಗೂ ಅವರ ಅನುಭವಕ್ಕೆ ಗೌರವವನ್ನು ಕೊಡಬೇಕು ಅವರೊಂದಿಗೆ ಸಮಯ ಕಳೆ ಯುದರ ಮೂಲಕ ಅವರನ್ನು ಕಾಡುವ ಒಂಟಿತನವನ್ನು ದೂರ ಮಾಡಬೇಕು ಎಂದೂ ಮಂದಪ್ಪ ತಿಳಿಸಿದರು. ಮುಖ್ಯ ಶಿಕ್ಷಕಿ ರೀಟಾ ಸ್ವಾಗತಿಸಿ,ಉಪನ್ಯಾಸಕಿ ಸವಿತ ಅತಿಥಿಗಳನ್ನು ಪರಿಚಯಿಸಿ, ಉಪನ್ಯಾಸಕಿ ಸೀಮಾ ವಂದಿಸಿದರು.ರೋಟರಿ ಮಿಸ್ಟಿ ಹಿಲ್ಸ್ ನ ಪ್ರಿಯಾಪ್ರಶಾಂತ್ ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0