Kodagu

ಕಡಂಗ ಪ್ರಾಥಮಿಕ ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರಿಗೆ ಗೌರವ: ಗುರುಹಿರಿಯರನ್ನು ಗೌರವಿಸುವುದು ಆದ್ಯತೆಯಾಗಲಿ: -ಡಾ.ಶುಭಾ ಕೆ.ಜಿ

admincoorgdaily

ಕಡಂಗ ಪ್ರಾಥಮಿಕ ಶಾಲೆಯಲ್ಲಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರಿಗೆ ಗೌರವ:  ಗುರುಹಿರಿಯರನ್ನು ಗೌರವಿಸುವುದು ಆದ್ಯತೆಯಾಗಲಿ: -ಡಾ.ಶುಭಾ ಕೆ.ಜಿ

ಮಡಿಕೇರಿ; ಕಡಂಗ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಹಿರಿಯರ ದಿನಾಚರಣೆ ಅಂಗವಾಗಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆ ವತಿಯಿಂದ ಹಿರಿಯ ಜೀವಿಗಳಿಗೆ ನಮನ ಕಾರ್ಯಕ್ರಮವು ನಡೆಸಲಾಯಿತು ಕಾರ್ಯಕ್ರಮದಲ್ಲಿ ಹಿರಿಯರಾದ ಶಾರದಾ ಕೆ.ಜೆ, ಅಬ್ದುಲ್ಲಾ ಎಂ. ಎ.,ಕೋಡಿರ ಪ್ರಕಾಶ್ ಈರಪ್ಪ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರು ಮಾತನಾಡಿ, ಹಿಂದಿನ ದಿನಗಳ ಜೀವನಶೈಲಿ, ಸಂಪ್ರದಾಯಗಳು, ಸಂಬಂಧಗಳ ಆತ್ಮೀಯತೆ., ನಮ್ಮ ಆಚರಣೆ, ಭಾಷೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯ ಬೇಕೆಂಬ ಆಶಯ ವ್ಯಕ್ತಪಡಿಸಿದರು.

ಹಿರಿಯರನ್ನು ಗೌರವಿಸಿ, ಅವರ ಅನುಭವವನ್ನು ಕೇಳಿ, ಅವರೊಂದಿಗೆ ಸಮಯ ಕಳೆಯುವಂತೆ ಮಕ್ಕಳಿಗೆ ತಸಲಹೆ ನೀಡಿದರು. -ಹಿರಿಯರನ್ನು ಗೌರವಿಸುವುದು ನಮ್ಮ ಕರ್ತವ್ಯ ಮಾತ್ರವಲ್ಲ, ನಮ್ಮ ಸಂಸ್ಕೃತಿಯ ಹೆಮ್ಮೆ. ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ನಮಗೆ ಸದಾ ದಾರಿದೀಪವಾಗಿರಲಿ. ನಿಮ್ಮೆಲ್ಲರಿಗೂ ನಮ್ಮ ಹೃತ್ಪೂರ್ವಕ ನಮನಗಳು. ನಿಮ್ಮ ಬದುಕು ಸದಾ ಆರೋಗ್ಯದಿಂದ, ಸಂತೋಷದಿಂದ ಇರಲಿ ಎಂದು ಹಾರೈಸುತ್ತೇವೆ. ಎಂದು ಮಕ್ಕಳು ಹಾಗೂ ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದರು.

ವೈದ್ಯಾಧಿಕಾರಿ ಡಾ.ಶುಭಾ ಕೆ.ಜಿ. ಮಾತನಾಡಿ, ಗುರು ಹಿರಿಯರನ್ನು ಗೌರವಿಸುವುದು ಕಿರಿಯರ ಆದ್ಯತೆಯಾಗಬೇಕು. ಎಲ್ಲಿ ಹಿರಿಯರಿಗೆ ಗೌರವ ದೊರಕುತ್ತದೆಯೋ ಅಲ್ಲಿ, ನೆಮ್ಮದಿ ನೆಲಸಿರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮೋಹಿತ್ ಪೂಣಚ್ಚ , ಶಾಲಾ ಎಸ್ ಡಿ ಎಮ್ ಸಿ ಸದಸ್ಯೆ ಕಾವೇರಮ್ಮ ಉಪಸ್ಥಿತರಿದ್ದರು ಮುಖ್ಯೋಪಾಧ್ಯಾಯಿನಿ ಹೇಮಾವತಿ ಎಚ್ ಎ, ಸ್ವಾಗತಿಸಿದರು. ವತ್ಸಲಾ ಶ್ರೀಶ ನಿರೂಪಿಸಿದರು. ದೈಹಿಕ ಶಿಕ್ಷಕಿ ಎಂ.ಬಿ. ಶೋಭಾ ವಂದಿಸಿದರು.