ನಿವೃತ್ತ ಲೆಪ್ಟಿನೆಂಟ್ ಜನರಲ್ ಡಾ. ಬಿ.ಎನ್.ಬಿ.ಎಂ.ಪ್ರಸಾದ್ ಅವರಿಗೆ ಥೋರಾಸಿಕ್ ಎಂಡೋ ಸ್ಕೋಪಿ ಸೊಸೈಟಿ ಆಫ್ ಇಂಡಿಯಾ ಪ್ರಶಸ್ತಿ

Dec 21, 2025 - 18:05
 0  234
ನಿವೃತ್ತ ಲೆಪ್ಟಿನೆಂಟ್  ಜನರಲ್ ಡಾ. ಬಿ.ಎನ್.ಬಿ.ಎಂ.ಪ್ರಸಾದ್  ಅವರಿಗೆ ಥೋರಾಸಿಕ್ ಎಂಡೋ ಸ್ಕೋಪಿ ಸೊಸೈಟಿ ಆಫ್ ಇಂಡಿಯಾ  ಪ್ರಶಸ್ತಿ

 ಸುಂಟಿಕೊಪ್ಪ,ಡಿ.20: ಕೊಡಗಿನವರಾದ ನಿವೃತ್ತ ಲೆಪ್ಟಿನೆಂಟ್ ಜನರಲ್ ಡಾ. ಬಿ.ಎನ್.ಬಿ.ಎಂ.ಪ್ರಸಾದ್ ಎಸ್ ಎಂ ವಿಎಸ್‌ಎಂ ಪಿಎಚ್‌ಎಸ್ ಅವರಿಗೆ ಥೋರಾಸಿಕ್ ಎಂಡೋ ಸ್ಕೋಪಿ ಸೊಸೈಟಿ ಆಫ್ ಇಂಡಿಯಾ ವತಿಯಿಂದ ನೀಡಲಾಗುವ ರಾಷ್ಟ್ರಮಟ್ಟದ ಜೀವಮಾನ ಸಾಧನೆ ಪ್ರಶಸ್ತಿ 2025 ನೀಡಿ ಗೌರವಿಸಲಾಗಿದೆ. 

   ಇತ್ತೀಚೆಗೆ ಮುಂಬಯಿಯ ಪಂಚತಾರ ಹೋಟೆಲ್ ಜೆ ಡಬ್ಲೂ ಮೆರಿಯಟ್ ಅಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಖ್ಯಾತ ಸಿನಿಮಾ ನಟಿ ಮಲೈಕಾ ಆರೋರ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.

   ಲೆಪ್ಟಿನೆಂಟ್ ಜನರಲ್ ಡಾ. ಬಿ.ಎನ್.ಬಿ.ಎಂ.ಪ್ರಸಾದ್ ಅವರು ಭಾರತದಲ್ಲಿ ಶ್ವಾಸಕೋಶದ ಚಿಕಿತ್ಸೆ ಮತ್ತು ಅದರಲ್ಲಿ ಮಾಡಿರುವ ಸಾಧನೆ 3 ದಶಕಗಳನ್ನು ಮೀರಿದೆ ಸೇನಾ ಸೇವ ಅವಧಿಯಲ್ಲಿ ಅವರು ದೇಶದ ಹಲವು ಸೇನಾ ಆಸ್ಪತ್ರೆಗಳಲ್ಲಿ ಶ್ವಾಸಕೋಶದ ಕಾಯಿಲೆಗಳು ಕಾರಣ ಮತ್ತು ಚಿಕಿತ್ಸೆ ಕುರಿತಾದ ಅತ್ಯುಧುನಿಕ ಚಿಕಿತ್ಸಾ ವಿಧಾನಗಳನ್ನು ಜಾರಿಗೆ ತಂದ ಮೊದಲಿಗರಾಗಿದ್ದಾರೆ. 

   ತಮ್ಮ ನಿವೃತ್ತಿಯ ನಂತರ ಶ್ವಾಸಕೋಶದ ಕಾಯಿಲೆಗಳು ಕಾರಣ ರಕ್ಷಣೆ ಚಿಕಿತ್ಸಾ ವಿಧಾನಗಳು ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡ ಅವರು ಕೊಚ್ಚಿನ್ ಮತ್ತು ಜೋದ್‌ಪುರದಲ್ಲಿರುವ ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆಯಲ್ಲಿ ಉತ್ತರ ಪ್ರದೇಶದ ಲಕ್ನೋದಲ್ಲಿ ಕಿಂಗ್ ಜಾರ್ಜ್ ವೈಧ್ಯಕೀಯ ವಿಶ್ವ ವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಕೋವಿಡ್ ಸಮಯದಲ್ಲಿ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಸರಕಾರಕ್ಕೆ ವೈದಕೀಯ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ತಮ್ಮ ಜೀವವನ್ನು ಪಣಕ್ಕಿಟ್ಟು ಕಿಂಗ್ ಜಾರ್ಜ್ ವೈಧಕೀಯ ವಿಶ್ವ ವಿದ್ಯಾಲಯದ 1000 ಹಾಸಿಗೆಗಳ ಕೋವಿಡ್ ರಕ್ಷಣಾ ಕೇಂದ್ರದಲ್ಲಿ ಕೆಲಸ ನಿರ್ವಹಿಸಿ ನೂರಾರು ಮಂದಿಯ ಜೀವ ರಕ್ಷಣೆಯಲ್ಲಿ ಯಶಸ್ವಿಯಾಗಿದ್ದಾರೆ. ಅವರು ಕೋವಿಡ್ ಕುರಿತಾದ ಪುಸ್ತಕವನ್ನು ಬರೆದಿದ್ದು ತಮ್ಮ ಕೋವಿಡ್ ಕಾಲದ ಸವಾಲು ವಿವರಿಸಿದ್ದಾರೆ. ದೇಶದ್ಯಾಂತ ವಿವಿಧ ವಿಶ್ವ ವಿದ್ಯಾಲಯಗಳಲ್ಲಿ ತಜ್ಞ ವೈಧ್ಯರ ರಾಷ್ಟ್ರೀಯ ಸಮಾವೇಶಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ದಿಕ್ಸೂಚಿ ಭಾಷಣಕರರಾಗಿ ತಮ್ಮ ಸಮಕಾಲೀನರೊಂದಿಗೆ ಕಿರಿಯರಿಗೆ ಮತ್ತು ಸಂಶೋಧನ ನಿರತರಿಗೆ ಜ್ಞಾನದ ಬೆಳಕಾಗಿ ಆಶಾ ಕಿರಣವಾಗಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಗೌರವಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0