ನಿವೃತ್ತ ಪ್ರಾಂಶುಪಾಲ ಪ್ರೊ. ಎ. ಎಸ್. ಈರಪ್ಪ ನಿಧನ

Aug 21, 2026 - 23:24
 0  52
ನಿವೃತ್ತ ಪ್ರಾಂಶುಪಾಲ ಪ್ರೊ. ಎ. ಎಸ್. ಈರಪ್ಪ ನಿಧನ

ಪೊನ್ನಂಪೇಟೆ, ಆ. 21: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಎ. ಎಸ್. ಈರಪ್ಪ (80) ಅವರು ತಾ. 21ರಂದು ಸಂಜೆ ಅನಾರೋಗ್ಯದಿಂದ ಗೋಣಿಕೊಪ್ಪಲು ಲೋಪಮುದ್ರಾ ಆಸ್ಪತ್ರೆಯಲ್ಲಿ ನಿಧನರಾದರು.

ಈರಪ್ಪ ಅವರು ಗೋಣಿಕೊಪ್ಪಲು ಕಾವೇರಿ ಕಾಲೇಜು ಹಾಗೂ ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ 38 ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೇ ಬಾಸ್ಕೆಟ್ ಬಾಲ್ ತರಬೇತುದಾರರಾಗಿಯೂ ಹಲವು ವಿದ್ಯಾರ್ಥಿಗಳ ಕ್ರೀಡಾ ಬದುಕಿಗೆ ಉತ್ತೇಜನ ನೀಡಿದ್ದಾರೆ.

 ತಾ. 22 (ಇಂದು) ರಂದು ಈರಪ್ಪ ಅವರ ಮೃತದೇಹವನ್ನು ಮಡಿಕೇರಿಯ ಸುದರ್ಶನ ವೃತ್ತ ಸಮೀಪ ಇರುವ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು. ಮದ್ಯಾಹ್ನ 2 ಗಂಟೆ ನಂತರ ಮಡಿಕೇರಿ ಕೊಡವ ಸಮಾಜ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಮೃತರು ಪುತ್ರ, ಪತ್ನಿ ಹಾಗೂ ಸಹೋದರ, ಸಹೋದರಿಯರು, ಅನೇಕ ಸಹೋದ್ಯೋಗಿಗಳು ಹಾಗೂ ಅಪಾರ ವಿದ್ಯಾರ್ಥಿ ವೃಂದವನ್ನು ಅಗಲಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0