ಕುರಿ ಕೊಟ್ಟಿಗೆಯಲ್ಲಿ ಸೇರಿಕೊಂಡಿದ್ದ ನಾಗರಹಾವನ್ನು ರಕ್ಷಿಸಿದ ನಿವೃತ್ತ ಸೈನಿಕ ಸ್ನೇಕ್ ನಾಗರಾಜ್
admincoorgdaily

ಶನಿವಾರಸಂತೆ:-ಶುಕ್ರವಾರ ರಾತ್ರಿ ಸಮೀಪದ ಮುಳ್ಳೂರು ಗ್ರಾಮದ ನಟೇಶ್ ಎಂಬುವರ ಕುರಿಯ ಕೊಟ್ಟಿಗೆಯಲ್ಲಿ ನಾಲ್ಕೂವರೆ ಅಡಿ ಉದ್ದ ಮತ್ತು ಮೂರು ಕೆಜಿ ತೂಕದ ಕರಿ ನಾಗರಹಾವು ಸೇರಿಕೊಂಡಿರುವುದನ್ನು ಗಮನಿಸಿದ ನಟೇಶ್ ಅವರು ಶನಿವಾರಸಂತೆ ನಿವಾಸಿ ಮತ್ತು ನಿವೃತ್ತ ಸೈನಿಕ ಸ್ನೇಕ್ ನಾಗರಾಜ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು ಸ್ಥಳಕ್ಕೆ ದಾವಿಸಿದ ನಾಗರಾಜ್ ನಾಗರಹಾವನ್ನು ಹಿಡಿದು ರಕ್ಷಿಸಿ ನಂತರ ಹಾವನ್ನು ಪಕ್ಕದ ಅರಣ್ಯಕ್ಕೆ ಬಿಟ್ಟರು.