ಅಂತರರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಫರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಮಿಂಚಿದ ಸಿದ್ದಾಪುರದ ರಿಮ್ಸಾ ಖಾನಂ

ಅಂತರರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಫರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಮಿಂಚಿದ ಸಿದ್ದಾಪುರದ ರಿಮ್ಸಾ ಖಾನಂ

ಮಡಿಕೇರಿ:ಕುಶಾಲನಗರದ ಕುಸುಮರಾಜ್ ಅವರ ನೇತೃತ್ವದಲ್ಲಿ ಶಿಕ್ಷಕರಾದ ಇರ್ಫಾನ್ ಅವರು ಕೊಡಗಿನ ಹಲವಾರು ಶಾಲೆಗಳಲ್ಲಿ ಅಬಾಕಸ್ (ಗಣಿತದ ಲೆಕ್ಕಾಚಾರ) ತರಗತಿಯನ್ನು ನಡೆಸುತ್ತಿದ್ದು, ಹಲವಷ್ಟು ವಿದ್ಯಾರ್ಥಿಗಳು ಜಿಲ್ಲಾವಾರು ಅಬಾಕಸ್ ನಲ್ಲಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ಅದರಲ್ಲಿ ಸೆಪ್ಟೆಂಬರ್ 20-21 ರಂದು ಚೆನ್ನೈನ ಸೀತಾಲಕ್ಷ್ಮೀ ಸಭಾಂಗಣದಲ್ಲಿ ನಡೆದ "ಅಂತರರಾಷ್ಟ್ರೀಯ ಅಬಾಕಸ್ ಸ್ಪರ್ಧೆ" ಯಲ್ಲಿ ಕೊಡಗಿನಿಂದ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ.

ಅದರಲ್ಲಿ ಸಿದ್ದಾಪುರ ಸೆಂಟ್ ಆನ್ಸ್ ಕಾನ್ವೆಂಟ್ ಸಿ ಬಿ ಎಸ್ ಸಿ. ಯ ನಾಲ್ಕನೆಯ ತರಗತಿಯ, ರಿಮ್ಸಾ ಖಾನಂ, ಸಜಾ ಮರಿಯಂ, ಅಯಾನ್, ಫಾತಿಮ ಹಾನಿಯ ಈ ನಾಲ್ಕು ವಿದ್ಯಾರ್ಥಿಗಳು ಪಾಲ್ಗೊಂಡು ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಅದರಲ್ಲಿ ವಿದ್ಯಾರ್ಥಿನಿ ರಿಮ್ಸಾ ಖಾನಂ, ಹತ್ತು ನಿಮಿಷದ ಸ್ಪರ್ಧೆಯನ್ನು ನಾಲ್ಕು ನಿಮಿಷದಲ್ಲಿ ಮುಗಿಸಿ "ಚಾಂಪಿಯನ್ ಆಫ್ ಚಾಂಪಿಯನ್" ಆಗಿ ಹೊರಹೊಮ್ಮಿ, ಪ್ರಶಸ್ತಿ, ಟ್ರೋಫಿ ಮತ್ತು ಪದಕ ಪಡೆದು ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದುಕೊಟ್ಟಿದ್ದಾಳೆ. ಆಟ ಪಾಠದ ಜೊತೆಗೆ ರೀಲ್ಸ್ ಮೂಲಕ ಮನೆಮಾತಾಗಿರುವ ರಿಮ್ಸಾ ಖಾನಂ ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯೆ ಜಮೀರಾ ಎಂ.ಎ., ಮತ್ತು ಆಟೋ ಚಾಲಕ ಜಾವಿದ್ ದಂಪತಿಗಳ ಪುತ್ರಿಯಾಗಿದ್ದಾಳೆ.