Kodagu

ಅಬುಧಾಬಿಯಲ್ಲಿ ಕೊಡಗಿನ ರಿಯಾಜ್ ಲೋಕೋ ಪೈಲಟ್

admincoorgdaily

ಅಬುಧಾಬಿಯಲ್ಲಿ ಕೊಡಗಿನ ರಿಯಾಜ್ ಲೋಕೋ ಪೈಲಟ್

ಮಡಿಕೇರಿ, ಜು.2: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತಿಹಾದ್' ರೈಲು ಸೇವೆಯ ಲೋಕೋ ಪೈಲಟ್ ಆಗಿ ಕೊಡಗು ಜಿಲ್ಲೆಯ ಮಾದಾಪುರ ಗ್ರಾಮದ ರಿಯಾಜ್ ನಜೀರ್ ಅವರು ಕಾರ್ಯನಿರ್ವಹಿಸಿದ್ದಾರೆ.

ಸಾರಿಗೆ ಇತಿಹಾಸದಲ್ಲಿ ಮೈಲಿಗಲ್ಲು ಸೃಷ್ಟಿಸಿರುವ ಯು.ಎ.ಇ.ಯ ಹೊಸ ಪ್ರಯಾಣಿಕ ರೈಲು ಸಾರಿಗೆಯ ಪ್ರಥಮ ಯಾನಕ್ಕೆ ಪೈಲಟ್ ಆಗಿ ರಿಯಾಜ್ ಅವರನ್ನು ಅಲ್ಲಿನ ಆಡಳಿತ ನೇಮಕ ಮಾಡಿದೆ. ರಿಯಾಜ್ ಅವರು ಕತಾರ್ ಮೆಟ್ರೊ ಮತ್ತು ಕತಾರ್ ಟ್ರಾಮ್ ಸೇವೆಗಳ ಉದ್ಘಾಟನೆಯ ವೇಳೆ ಕೂಡ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದ್ದರು.