ಶಾಸಕ ಎ‌ಎಸ್ ಪೊನ್ನಣ್ಣ ಅವರ ಅನುದಾನದಲ್ಲಿ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡಮಕ್ಕಿ-ಬೂದಿಮಾಳದಲ್ಲಿ 15 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ಪೂರ್ಣ

ಶಾಸಕ ಎ‌ಎಸ್ ಪೊನ್ನಣ್ಣ ಅವರ ಅನುದಾನದಲ್ಲಿ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡಮಕ್ಕಿ-ಬೂದಿಮಾಳದಲ್ಲಿ 15 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ಪೂರ್ಣ

ವಿರಾಜಪೇಟೆ:ವಿಧಾನ ಸಭೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರ ಅನುದಾನದಲ್ಲಿ, ಬೇಟೋಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡಮಕ್ಕಿ-ಬೂದಿಮಾಳ ರಸ್ತೆಗೆ ₹ 15 ಲಕ್ಷ ಅನುದಾನದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. ಇದರಲ್ಲಿ ₹ 10 ಲಕ್ಷ ಹಾಗು ₹ 5 ಲಕ್ಷ ಅನುದಾನದಲ್ಲಿ 2 ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ.

 ಈ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಅನುದಾನ ಒದಗಿಸಿದ ಶಾಸಕರಾದ ಎ.ಎಸ್ ಪೊನ್ನಣ್ಣ ರವರಿಗೂ ಹಾಗೂ ಇದಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ ರವರಿಗೂ ಸಹಕರಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ ರವರಿಗೂ, ಗ್ಯಾರೆಂಟಿ ಯೋಜನೆ ಸದಸ್ಯರಾದಂತ ಟಿ.ಕೆ ಹರೀಶ ಮತ್ತು ಟಿ.ಪಿ ಪುರುಷೋತ್ತಮ ರವರಿಗೆ, ಪಿ.ಬಿ ಸುರೇಶ್, ಶಶಿ, ರವಿ, ಹರೀಶ, ಮನೋಹರ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಹೆಗ್ಗಳ-ಎಡಮಕ್ಕಿ-ಬೂದಿಮಾಳ ಗ್ರಾಮಸ್ಥರಾದ ನಾವು ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.