ಮದೆ ಬಳಿ ರಸ್ತೆಗೆ ಬಂಡೆ ಕುಸಿತ: ಕೆಲಕಾಲ ಸಂಚಾರ ಅಡ್ಡಿ, ಬಳಿಕ ತೆರವು
admincoorgdaily

ಮಡಿಕೇರಿ: ಮಂಗಳೂರು - ಮಡಿಕೇರಿ ಮುಖ್ಯ ರಸ್ತೆಯ ಮದೆ ಗ್ರಾಮದ ಕರ್ತೋಜೆ ಬಳಿ ಇಂದು ಬಂಡೆ ಕಲ್ಲು ಉರುಳಿ ಬಿದ್ದು ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ಬೆಟ್ಟದ ಮೇಲಿನಿಂದ ಬಂಡೆ ಕಲ್ಲು ರಸ್ತೆಯ ಮಧ್ಯಕ್ಕೆ ಉರುಳಿ ಬಿದ್ದ ಕಾರಣ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳು ನಿಂತುಕೊಂಡವು. ಸ್ಥಳದಲ್ಲಿ ಸ್ವಲ್ಪ ಹೊತ್ತು ವಾಹನ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿ, ಜೆಸಿಬಿ ಸಹಾಯದಿಂದ ಬಂಡೆ ಕಲ್ಲನ್ನು ತೆರವುಗೊಳಿಸಿದರು.