ಆಲೂರು ಸಿದ್ದಾಪುರದಲ್ಲಿ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ
ಶನಿವಾರಸಂತೆ:-ಸಮೀಪದ ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ಇದರ 2026-27ನೇ ಸಾಲಿನ ಪದಗ್ರಹಣ ಸಮಾರಂಭವನ್ನು ಆಲೂರುಸಿದ್ದಾಪುರ ವೈಭವ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಸಮಾರಂಭದಲ್ಲಿ ಪದಗ್ರಹಣ ಅಧಿಕಾರಿ ರೋಟರಿಯನ್ ರತನ್ ತಮ್ಮಯ್ಯ ಅಧಿಕಾರವಹಿಸಿಕೊಂಡ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದ ಬಳಿಕ ಮಾತನಾಡಿ-ರೋಟರಿ ಸಂಸ್ಥೆಯು ವಿಶ್ವದ ಸಮಾಜ ಸೇವಾ ಸಂಸ್ಥೆಯಾಗಿದ್ದು ವಿಶ್ವ ಮಟ್ಟದಲ್ಲಿ ಜನ ಮನ್ನಣೆಗಳಿಸಿದ ಸಂಸ್ಥೆಯಾಗಿದೆ ರೋಟರಿ ಸದಸ್ಯರು ನಿಸ್ವಾರ್ಥವಾಗಿ ಸಮಾಜ ಸೇವೆ ಮಾಡುತ್ತಿದ್ದು ಈ ಮೂಲಕ ರೋಟರಿ ಸದಸ್ಯರು ಸಮಾಜದಲ್ಲಿ ಗೌರವ ಸಂಪಾದಿಸುತ್ತಾರೆ ಎಂದರು.
ಆಲೂರು ಸಿದ್ದಾಪುರ ರೋಟರಿ ಸದಸ್ಯರು ಈ ಭಾಗದಲ್ಲಿ ಉತ್ತಮವಾಗಿ ಸಮಾಜ ಮುಖಿ ಕಾರ್ಯವನ್ನುಮಾಡುತ್ತಿರುವುದು ಶ್ಲಾಘನಿಯಕರವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ರೋಟರಿ ಕ್ಲಬ್ ಜಿಲ್ಲಾ ಸಹಾಯಕ ರಾಜ್ಯಪಾಲ ರಂಗಸ್ವಾಮಿ ಮಾತನಾಡಿ-ರೋಟರಿ ಸಂಸ್ಥೆಯು ಸಮಾಜ ಸೇವೆಯ ಜೊತೆಯಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಈ ನಿಟ್ಟಿನಲ್ಲಿ ಸಾರ್ವಜನಿಕರು ರೋಟರಿ ಸಂಸ್ಥೆ ಸದಸ್ಯರ ಸಮಾಜ ಸೇವೆಯ ಕಾರ್ಯ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ರೋಟರಿ ಮಲ್ಲೇಶ್ವರ ಕ್ಲಬಿನ 2026-27ನೇ ಸಾಲಿನ ಅಧ್ಯಕ್ಷರಾಗಿ ಸಂಪತ್ ಮತ್ತು ಕಾರ್ಯದರ್ಶಿಯಾಗಿ ಸತೀಶ್ ಕುಮಾರ್ ಅಧಿಕಾರ ಸ್ವೀಕರಿಸಿದರು. ಸಮಾರಂಭದಲ್ಲಿ ಜೋನಲ್ ಲೆಪ್ಟಿನೆಂಟ್ ವಸಂತ್ ಕುಮಾರ್, ಹಿಂದಿನ ಸಾಲಿನ ಅಧ್ಯಕ್ಷ ನಾರಾಯಣ ಸ್ವಾಮಿ, ಕಾರ್ಯದರ್ಶಿ ಕಿರಣ್ ಸೇರಿದಂತೆ ರೋಟರಿ ಸಂಸ್ಥೆಯ ಸರ್ವ ಸದಸ್ಯರು, ರೋಟರಿ ಸಂಸ್ಥೆ ಸದಸ್ಯರ ಕುಟುಂಬದ ಸದಸ್ಯರು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
