ನಾಪೋಕ್ಲುವಿನ ಕೆಪಿಎಸ್ ಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ: ದುಶ್ಚಟಗಳಿಂದ ದೂರವಿದ್ದು ಉತ್ತಮ ಪ್ರಜೆಯಾಗಿ ವಿದ್ಯಾರ್ಥಿಗಳಿಗೆ ಹಿರಿಯರ ಕಿವಿಮಾತು
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿಸಲಾದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನಾಪೋಕ್ಲುಗ್ರಾಮ ವ್ಯಾಪ್ತಿಯ ಹಿರಿಯರು ಹಾಗೂ ನಿವೃತ್ತ ಮುಖ್ಯ ಶಿಕ್ಷಕರಾದ ಚೋಕಿರ.ಬಿ.ಪೊನ್ನಪ್ಪ,
ಸಮಾಜ ಸೇವಕರಾದ ಕೇಟೋಳಿರ ರಾಜ ಗಣಪತಿ, ನೂರಂಬಡ ಎಸ್ ಉದಯ ಶಂಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿ ತು.
ಸನ್ಮಾನ ಸ್ವೀಕರಿಸಿದ ಬಳಿಕ ಮೂವರು ಸನ್ಮಾನಿತರು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡು ತಮ್ಮ ಬಾಳಿಗೆ ಬೆಳಕಾದ ಗುರುಹಿರಿಯರನ್ನು,ತಂದೆ-ತಾಯಿಯರ ಮಾರ್ಗದರ್ಶನವನ್ನು ಎಳೆಎಳೆಯಾಗಿ ಹೇಳುತ್ತಾ ಮಕ್ಕಳು ದುಶ್ಚಟಗಳಿಗೆ ದಾಸ ರಾಗದೆ,ಒಳ್ಳೆಯ ಶಿಕ್ಷಿತರಾಗಿ ಸಮಾಜದ ಸತ್ಪ್ರಜೆಯಾಗಬೇಕೆಂದು ಕಿವಿಮಾತು ಹೇಳಿದರು.
ಎಲ್ಲರ ಕುಟುಂಬ "ನಂದಾ ಗೋಕುಲ ಆಗಬೇಕು ಎಂದು ನುಡಿದ ಅವರುಗಳು ನಮ್ಮ ಆಶೀರ್ವಾದ ಸದಾ ನಿಮಗಿರುತ್ತದೆಂದು ತಿಳಿಸಿದರು.
ಸಂಸ್ಥೆಯ ವಿದ್ಯಾರ್ಥಿಗಳಾದ ಸುಮಿತಾ ಶಾಲ್, ಫಾತಿಮತ್ ಅಫ್ರೀನ, ಆಯಿಷಾ ಹಿರಿಯ ನಾಗರಿಕರ ದಿನಾಚರಣೆಯ ಮಹತ್ವ, ಹಿರಿಯರ ಅಗತ್ಯತೆ ,ಹಿರಿಯರಿಗೆ ಕಿರಿಯರು ನೀಡುವ ಗೌರವ, ಪ್ರೀತಿ,ಕಾಳಜಿಯ ಬಗ್ಗೆ ಮಾತನಾಡಿ ಇದೊಂದು ಅಭೂತಪೂರ್ವ ಕಾರ್ಯಕ್ರಮ ವಿದ್ಯಾರ್ಥಿಗಳಾದ ನಮಗೆ ಇಂತಹ ಕಾರ್ಯಕ್ರಮಗಳು ಸದುಪಯೋಗವಾಗುತ್ತದೆ.
ಯಾವುದೇ ಕಾರಣಕ್ಕೂ ನಮ್ಮ ಹಿರಿಯರನ್ನು ಅಸಡ್ಡೆ ಮಾಡಬಾರದು. ವೃದ್ಧಾಶ್ರಮ ವಾಸಿಗಳಾಗಿಸದೇ ನೋಡಿಕೊಳ್ಳಬೇಕೆಂದು ನುಡಿದರು.
ಕಾರ್ಯಕ್ರಮದಲ್ಲಿ ರೊ ಎಂ.ಧನಂಜಯ ಮಾತನಾಡಿ,ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿಯ ಕಾರ್ಯವ್ಯಾಪ್ತಿ ಮತ್ತು ಚಟುವಟಿಕೆಗಳ ಬಗ್ಗೆ ಸಮಾಜಮುಖಿ ಕಾರ್ಯಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆ.ಪಿ.ಎಸ್ ಶಾಲೆಯ ಉಪ ಪ್ರಾಂಶುಪಾಲರಾದ ಎಂ. ಎಸ್ ಶಿವಣ್ಣ ಮಾತನಾಡಿ ರೋಟರಿ ಮಿಸ್ಟಿ ಹಿಲ್ಸ್ ಆಯೋಜನೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ನಶಾಮುಕ್ತ ಭಾರತದ ಬಗ್ಗೆ ಪ್ರತಿಜ್ಞೆ ಸ್ವೀಕರಿಸಲಾಯಿತು.
ಈ ಸಂದರ್ಭ ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಎಸ್. ಡಿ.ಎಂ.ಸಿ ಸದಸ್ಯರಾದ ಸಿ. ಎಂ.ಉಸ್ಮಾನ್, ಇಂಟರಾಕ್ಟ್ ಕ್ಲಬ್ ನ ಸಂಯೋಜಕ ಶಿಕ್ಷಕಿ ಕೆ. ಬಿ.ಉಷಾರಾಣಿ,ರೋಟರಿ ಮಿಸ್ಟಿ ಹಿಲ್ಸ್ ನ ಸದಸ್ಯರಾದ ಅಜಿತ್ ನಾಣಯ್ಯ ,ಕ್ಯಾರಿ ಕಾರ್ಯಪ್ಪ,ನಿಶಾಂತ್ ಬೆಳ್ಳಿಯಪ್ಪ,ಶ್ರೀಹರಿ ರಾವ್ , ಸುಮನ್ ರಾವ್, ಸುಮೇಧ ಮತ್ತು ಶಾಲಾ ಶಿಕ್ಷಕರು ವೃಂದ ಉಪಸ್ಥಿತರಿದ್ದರು.
ಸಂಸ್ಥೆಯ ವಿದ್ಯಾರ್ಥಿಗಳಾದ ಶಮ್ನ ತಂಡದವರು ಪ್ರಾರ್ಥಿಸಿದರು.ಶಿಕ್ಷಕಿ ಪೂರ್ಣಿಮಾ ನಿರೂಪಿಸಿದರು.ಶಿಕ್ಷಕಿ ಕೆ. ಆರ್.ಮಾಲಿನಿ ಸ್ವಾಗತಿಸಿ,ಶಾಲಾ ವಿದ್ಯಾರ್ಥಿಸಂಘದ ಅಧ್ಯಕ್ಷೆ ತಂಝಿಲಾ ರೋಶ್ನಿ ಸರ್ವರನ್ನು ವಂದಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
