ರೋಟರಿ ಮಿಸ್ಟಿ ಹಿಲ್ಸ್ ನಿಂದ ಹಿರಿಯರಿಗೆ ಗೌರವ ನಮನ; ಬ್ಸಾಸಂ ಶಾಲೆಯಲ್ಲಿ ಮೂವರು ಹಿರಿಯರಿಗೆ ಸನ್ಮಾನ

Aug 21, 2026 - 18:13
 0  42
ರೋಟರಿ ಮಿಸ್ಟಿ ಹಿಲ್ಸ್ ನಿಂದ ಹಿರಿಯರಿಗೆ ಗೌರವ ನಮನ; ಬ್ಸಾಸಂ ಶಾಲೆಯಲ್ಲಿ ಮೂವರು ಹಿರಿಯರಿಗೆ  ಸನ್ಮಾನ

ಮಡಿಕೇರಿ ಆ.21 - ಸಿರಿವಂತನಾಗಬೇಕೆಂಬ ಆತುರದಿಂದ ಅಡ್ಡದಾರಿಯಲ್ಲಿ ತಪ್ಪು ಯೋಚನೆಗಳನ್ನು ಎಂದಿಗೂ ಮಾಡಬೇಡಿ. ಶ್ರಮವಹಿಸಿ ದುಡಿದರಷ್ಟೇ ಜೀವನದಲ್ಲಿ ಸೂಕ್ತ ಪ್ರತಿಫಲ ಖಂಡಿತಾ ದೊರಕುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ವಿದ್ಯಾಥಿ೯ಗಳಿಗೆ ಕಿವಿಮಾತು ಹೇಳಿದರು.

ನಗರದ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಬ್ಲಾಸಂ ಶಾಲೆಯಲ್ಲಿ ಆಯೋಜಿಸಲ್ಪಟ್ಟಿದ್ದ ಹಿರಿಯ ಜೀವಿಗಳಿಗೆ ನಮನ ಕಾಯ೯ಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ರಮೇಶ್ ಮಾತನಾಡಿದರು.

ವಿದ್ಯಾಥಿ೯ಗಳು ಶಿಕ್ಷಣ ಪಡೆಯುವ ಹಂತದಲ್ಲಿಯೇ ಮಾತನಾಡುವ ಕಲೆಯನ್ನು ಸಿದ್ದಿಸಿಕೊಂಡರೆ ಸಮಾಜದಲ್ಲಿ ಮುಂದೆ ಇದರಿಂದ ಸಾಕಷ್ಟು ಅನುಕೂಲವಾಗುತ್ತದೆ ಎಂದು ಹೇಳಿದ ಟಿ.ಪಿ. ರಮೇಶ್, ಜೀವನ ಎಂಬುದು ಸದಾ ಸುಖದಿಂದ ಕೂಡಿರುವುದಿಲ್ಲ. ಹೀಗಾಗಿ ಮಕ್ಕಳು ಸಾಕಷ್ಟು ಕಷ್ಟ, ಸೋಲುಗಳ ಸವಾಲನ್ನೂ ಎದುರಿಸಲು ಮಾನಸಿಕವಾಗಿ ಸಿದ್ದರಾಗಿರಬೇಕು. ಶ್ರೀಮಂತಿಕೆ ಪಡೆಯಲು ಯಾವುದೇ ಕಾರಣಕ್ಕಾ ತಪ್ಪು ಹಾದಿಯಲ್ಲಿ ಸಾಗಬಾರದು ಎಂದೂ ಕಿವಿಮಾತು ಹೇಳಿದರು.

ಸನ್ಮಾನಿತರಾದ ತಳೂರು ಆನಂದ್ ಮಾತನಾಡಿ, ದುಡ್ಡಿಲ್ಲದ ಕಾಲಘಟ್ಟದಲ್ಲಿ ಬೆಳೆದ ತಮ್ಮಂಥ ಹಿರಿಯರು ಜೀವನದಲ್ಲಿ ಸಾಕಷ್ಟು ಶ್ರಮ ಪಟ್ಟಿದ್ದೇವೆ. ಇಂದಿನ ಮಕ್ಕಳು ಅಂಥ ಕಷ್ಟ ನೋಡಲಿಲ್ಲ. ಹೀಗಾಗಿ ಸುಖದಲ್ಲಿ ಬೆಳೆಯಲು ಕಾರಣರಾದ ಪೋಷಕರಿಗೆ, ಶಿಕ್ಷಕರಿಗೆ ಮಕ್ಕಳು ಸದಾ ಕೖತಜ್ಞತೆ ತೋರಬೇಕೆಂದು ನುಡಿದರು.

ಸನ್ಮಾನಿತರಾದ ಅಂಬೆಕಲ್ ಸುಶೀಲಾ ಕುಶಾಲಪ್ಪ ಮಾತನಾಡಿ, ಹಿರಿಯರು ಅನಾರೋಗ್ಯದಿಂದ ಇದ್ದ ಸಂದಭ೯ ಅವರನ್ನು ಸೂಕ್ತ ರೀತಿಯಲ್ಲಿ ಆರೈಕೆ ಮಾಡುವುದು ಯುವಪೀಳಿಗೆಯ ಕತ೯ವ್ಯವಾಗಬೇಕು. ಹಿರಿಯರನ್ನು ನಿಲ೯ಕ್ಷಿಸಬೇಡಿ ಎಂದು ಕರೆ ನೀಡಿದರು.

ರೋಟರಿ ಮಿಸ್ಟಿ ಹಿಲ್ಸ್ ನ ಹಿರಿಯ ಜೀವಗಳಿಗೆ ಗೌರವ ನಮನ ಕಾಯ೯ಕ್ರಮ ಸಂಚಾಲಕ ಅನಿಲ್ ಹೆಚ್.ಟಿ. ಮಾತನಾಡಿ, ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಜಿಲ್ಲೆಯಾದ್ಯಂತ ವಿಶ್ವಹಿರಿಯ ನಾಗರಿಕರ ದಿನದಂದು 25 ಶಾಲೆಗಳಲ್ಲಿ 85 ಹಿರಿಯ ನಾಗರಿಕರನ್ನು ಸನ್ಮಾನಿಸಲಾಗಿದೆ. ಭಾರತದಲ್ಲಿಯೇ ರೋಟರಿ ಸಂಸ್ಥೆಯಿಂದ ಈ ವಿನೂತನ ಕಾಯ೯ಕ್ರಮ ಮಡಿಕೇರಿಯಲ್ಲಿ ಜರುಗಿದ್ದು ಶ್ಲಾಘನೀಯ ಎಂದರು. ಬಸ್ ನಲ್ಲಿ ಹಿರಿಯರು ನಿಂತುಕೊಂಡದ್ದನ್ನು ಗಮನಿಸಿ ವಿದ್ಯಾಥಿ೯ಗಳು ತಮ್ಮ ಸೀಟ್ ನ್ನು ಹಿರಿಯರಿಗೆ ನೀಡಿ. ಮನೆ ಮತ್ತು ಸಮಾಜದಲ್ಲಿ ಹಿರಿಯರಿದ್ದರೆ ಅದು ಶೋಭೆ, ಶಾಂತಿಯುತ ಸಮಾಜ ಮತ್ತು ಮನೆಯ ವಾತಾವರಣಕ್ಕೆ ಹಿರಿಯರ ಅನಿವಾಯ೯ತೆ ಇದೆ ಎಂದು ಅನಿಲ್ ಅಭಿಪ್ರಾಯಪಟ್ಟರು.

ಬ್ಲಾಸಂ ಶಾಲೆಯ ಮುಖ್ಯ ಶಿಕ್ಷಕಿ ಅನುಸೂಯ ಮಾತನಾಡಿ, ಅನೇಕ ದಿನಾಚರಣೆಗಳಿಂತ ಹಿರಿಯರನ್ನು ಗೌರವಿಸುವ ಈ ದಿನಾಚರಣೆ ಮಕ್ಕಳ ಪಾಲಿಗೆ ಸಾಕಷ್ಟು ಸಂದೇಶ ನೀಡುವ ಉಪಯುಕ್ತ ಾಯ೯ಕ್ರಮ ಎಂದು ಹೆಮ್ಮೆಯಿಂದ ನುಡಿದರು.

ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕರಾದ ಅಂಬೆಕಲ್ ವಿನೋದ್ ಕುಶಾಲಪ್ಪ ಸ್ವಾಗತಿಸಿ, ಪ್ರಕಾಶ್ ಪೂವಯ್ಯ ಹಾಗೂ ಶಿಕ್ಷಕಿ ಸಫಿದಾ ಸನ್ಮಾನಿತರನ್ನು ಪರಿಚಯಿಸಿದ ಕಾಯ೯ಕ್ರಮದಲ್ಲಿ ಬ್ಲಾಸಂ ಶಾಲಾ ಶಿಕ್ಷಕಿ ಶೈಲಜ ವಂದಿಸಿದರು. ವಿದ್ಯಾಥಿ೯ಗಳಾದ ಪ್ರತಿಭಾ, ಅಜ್ಮಿಯ ಹಿರಿಯ ನಾಗರಿಕರ ಮಹತ್ವದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಸವೋ೯ದಯ ಸಮಿತಿ ಜಿಲ್ಲಾಧ್ಯಕ್ಷ ಅಂಬೆಕಲ್ ಕುಶಾಲಪ್ಪ, ರೋಟರಿ ಸದಸ್ಯೆ ಲೀನಾ ಪೂವಯ್ಯ ಹಾಜರಿದ್ದರು. ಸನ್ಮಾನಿತರನ್ನು ಶಾಲಾ ಬ್ಯಾಂಡ್ ವಾದನದ ಗೌರವದ ಮೂಲಕ ವೇದಿಕೆಗೆ ಕರೆತರಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0