Kodagu

ಮಡಿಕೇರಿ ಸಂಪಿಗೆಕಟ್ಟೆ ಕನ್ನಂಡಬಾಣೆ ರಸ್ತೆ ಅಭಿವೃದ್ಧಿಗೆ 80 ಲಕ್ಷ ರೂ ಅನುದಾನ

admincoorgdaily

ಮಡಿಕೇರಿ ಸಂಪಿಗೆಕಟ್ಟೆ ಕನ್ನಂಡಬಾಣೆ ರಸ್ತೆ ಅಭಿವೃದ್ಧಿಗೆ 80 ಲಕ್ಷ ರೂ ಅನುದಾನ

ಮಡಿಕೇರಿ;ನಗರದ ಸಂಪಿಗೆಕಟ್ಟೆಯಿಂದ ಕನ್ನಂಡಬಾಣೆ ಯ ಮೂಲಕ ಹಾದು ಹೋಗುವ ರಸ್ತೆ ಬಹುಕಾಲದಿಂದ ದುಸ್ಥಿತಿಯಲ್ಲಿದ್ದು ಮಡಿಕೇರಿ ನಗರದ ಜನತೆಯ ಹಿತದೃಷ್ಟಿಯಿಂದ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಸದರಿ ರಸ್ತೆಯ ಅಭಿವೃದ್ಧಿ ಗೆ 80 ಲಕ್ಷ ರೂಗಳ ಅನುದಾನ ಒದಗಿಸಿದ್ದಾರೆ.

 ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ರವರು ಮಾಹಿತಿ ನೀಡಿದ್ದಾರೆ. ನಗರ ಸಭೆ ಮತ್ತು ಹಿಂದಿನ ಜನಪ್ರತಿನಿಧಿಗಳು ಈ ರಸ್ತೆಯನ್ನು ಕಡೆಗಣಿಸಿದ್ದರು.ಈ ಬಾರಿ ಡಾ ಮಂತರ್ ಗೌಡರವರು ಈ ರಸ್ತೆ ಸೇರಿದಂತೆ ನಗರದ ಆತಂತರಿಕ ಮುಖ್ಯ ರಸ್ತೆಗಳ ಅಭಿವೃದ್ಧಿ ಗೆ ಒಟ್ಟು ಮೂರು ಕೋಟಿ ರೂಗಳ ಅನುದಾನ ಒದಗಿಸಿದ್ದು ಟೆಂಡರ್ ಕರೆಯಲಾಗಿದೆ. ಮಾರ್ಚ್ 7 ರಂದು ಟೆಂಡರ್ ತೆರದು ಅಂತಿಮಗೊಳಿಸಿ ಕಾರ್ಯಾದೇಶ ನೀಡಿದ ತಕ್ಷಣವೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತೆನ್ನಿರ ಮೈನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.