ಮಡಿಕೇರಿಯಲ್ಲಿ ಎಸ್.ಜಾನಕಿ ಗೀತ ನಮನ ಕಾರ್ಯಕ್ರಮ: ಕಲೆ, ಸಾಹಿತ್ಯ, ಸಂಗೀತದಿಂದ ಸಮಾಜದ ಒಗ್ಗಟ್ಟು ಸಾಧ್ಯ: ಜಿ.ಚಿದ್ವಿಲಾಸ್ ಅಭಿಮತ

Aug 14, 2026 - 18:39
 0  43
ಮಡಿಕೇರಿಯಲ್ಲಿ ಎಸ್.ಜಾನಕಿ ಗೀತ ನಮನ ಕಾರ್ಯಕ್ರಮ:  ಕಲೆ, ಸಾಹಿತ್ಯ, ಸಂಗೀತದಿಂದ ಸಮಾಜದ ಒಗ್ಗಟ್ಟು ಸಾಧ್ಯ: ಜಿ.ಚಿದ್ವಿಲಾಸ್ ಅಭಿಮತ

ಮಡಿಕೇರಿ, ಆ.14:  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಶುಕ್ರವಾರ( ಆ.14 ರಂದು ) ವಿವಿಧ ಸಂಘ- ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕೊಡಗು ಪತ್ರಿಕಾ ಭವನದ ಟಾಟಾ ಕಾಫಿ ಸಭಾಂಗಣದಲ್ಲಿ ಗಾನ ಕೋಗಿಲೆ ದಿವಂಗತ ಎಸ್.ಜಾನಕಿ ಅಮ್ಮ ಅವರಿಗೆ ಏರ್ಪಡಿಸಿದ್ದ ಗಾನ ನಮನ ಕಾರ್ಯಕ್ರಮದಲ್ಲಿ ಎಸ್.ಜಾನಕಿ ಅವರಿಗೆ ಪುಷ್ಪ ನಮನ-ನುಡಿ ನಮನ- ಗಾನ ನಮನದಲ್ಲಿ ಗಾಯಕರು ಎಸ್.ಜಾನಕಿ ಅವರು ಹಾಡಿರುವ ಹಾಡುಗಳನ್ನು ಸುಮಧುರವಾಗಿ ಹಾಡಿ ಸಂಗೀತ ಪ್ರಿಯರಿಗೆ ಸಂಗೀತದ ರಸದೌತಣ ಉಣಬಡಿಸಿದರು.

ಸುಮಧುರ ಗೀತ ಗಾಯನವು ಸಂಗೀತ ಪ್ರಿಯರ ಮನಸ್ಸನ್ನು ತಣಿಸಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಗಾಯಕರು ಎಸ್.ಜಾನಕಿ ಅವರು ಹಾಡಿರುವ ವಿವಿಧ‌ ಭಾವಪೂರ್ಣ ಹಾಡುಗಳು ಮತ್ತು ಹಿತವಾದ ಸಂಗೀತದ ಅಲೆಗಳು ಎಲ್ಲಾ ಕೇಳುಗರ ಎಲ್ಲರ ಮನಸ್ಸಿಗೆ ಅಪಾರ ಆನಂದ ನೀಡಿದವು.

ಗಾನ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ದಿ. ಎಸ್.ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಗಾಯಕರೂ ಆದ 'ಶಕ್ತಿ' ದಿನಪತ್ರಿಕೆಯ ಸಂಪಾದಕ ಜಿ.ಚಿದ್ದಿಲಾಸ್ ಮಾತನಾಡಿ, 'ದಕ್ಷಿಣ ಭಾರತದ ಕೋಗಿಲೆ' ಎಂದೇ ಖ್ಯಾತಿ ಪಡೆದಿರುವ ಎಸ್ ಜಾನಕಿ ಅವರು ಆರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅಪರೂಪದ ಕಂಠಸಿರಿಯಿಂದ ಭಾರತೀಯ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ್ದ ಜಾನಕಿ ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದರು.

ಕಲೆ, ಸಾಹಿತ್ಯ ಮತ್ತು ಸಂಗೀತವು ಸಮಾಜವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಭಾಷೆ ಮತ್ತು ಗಡಿಗಳನ್ನು ಮೀರಿ ಜನರನ್ನು ಭಾವನಾತ್ಮಕವಾಗಿ ಬೆಸೆಯುವ ಶಕ್ತಿ ಇವುಗಳಿಗೆ ಇದೆ. ಸಂಗೀತ ಮತ್ತು ಕಲೆಗಳು ಜನರ ಮನಸ್ಸಿನಲ್ಲಿ ಏಕತೆಯ ಭಾವನೆಯನ್ನು ಮೂಡಿಸುತ್ತವೆ.ಜಾತಿ, ಧರ್ಮ ಹಾಗೂ ಪ್ರಾದೇಶಿಕ ಭೇದಗಳನ್ನು ಮರೆಸಿ ಜನರನ್ನು ಒಂದೇ ವೇದಿಕೆಗೆ ತರುತ್ತವೆ ಎಂದರು.

ಸಂಗೀತ ಕ್ಷೇತ್ರಕ್ಕೆ ಹೆಚ್ಚಿನ ಪ್ರಾತಿನಿಧ್ಯ ಹಾಗೂ ಅಮೂಲ್ಯ ಕೊಡುಗೆ ನೀಡಿರುವ ಶಾಸ್ತ್ರೀಯ ಸಂಗೀತಗಾರರ ಸಾಧನೆಯ ಗುರುತಿಸುವಿಕೆ ಆಗದಿರುವುದು ಬೇಸರದ ಸಂಗತಿ ಎಂದರು.

   ಪ್ರಾಸ್ತಾವಕವಾಗಿ ಮಾತನಾಡಿದ ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಅಳಿಸಲಾಗದ ಹೆಸರಾಗಿರುವ.. 'ದಕ್ಷಿಣ ಭಾರತದ ಕೋಗಿಲೆ' ಎಂದೇ ಖ್ಯಾತಿ ಪಡೆದಿರುವ ಎಸ್ ಜಾನಕಿ ಅವರು, ಆರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅಪರೂಪದ ಕಂಠಸಿರಿಯಿಂದ ಭಾರತೀಯ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ್ದ ಜಾನಕಿ ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದರು.

   ಭಾರತೀಯ ಸಂಗೀತ ಸಾಮ್ರಜ್ಯದ ಗಾಯಕಿ ಎಸ್.ಜಾನಕಿ ಅವರ ಹೆಸರುಚಿರಸ್ಥಾಯಿಯಾಗಿ ಉಳಿಸುವ ದಿಸೆಯಲ್ಲಿ ಯುವಪೀಳಿಗೆಯು ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಉತ್ತಮ ಅವಕಾಶಗಳನ್ನು ಕಲ್ಪಿಸಬೇಕಾಗಿದೆ ಎಂದರು.

   ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ‌ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಎಸ್.ಜಾನಕಿ ಅವರಿಗೆ ನುಡಿ ನಮನ ಸಲ್ಲಿಸುವ ಉದ್ದೇಶದಿಂದ ಅವರ ಹೆಸರಿನಲ್ಲಿ ಆಯೋಜಿಸಿರುವ ಗೀತ ನಮನ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿರುವ ಗಾಯಕರು ಎಸ್.ಜಾನಕಿ ಅವರ ಹಾಡುಗಳನ್ನು ಹಾಡಿ ಸಂಗೀತಪ್ರಿಯರನ್ನು ರಂಜಿಸಿದ್ದಾರೆ. ಗಾನಸುಧೆ ಎಸ್.ಜಾನಕಿ ಅವರ ಹಾಡುಗಳು ಈ ಸಮಾಜದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಮೂಲಕ ಯುವಜನಾಂಗ ಇವರ ಮಧುರ ಗೀತೆಗಳನ್ನು ಹಾಡುವ ಮೂಲಕ ಸಂಗೀತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಭಾರತೀಯ ಚಿತ್ರ ಸಂಗೀತದ ಇತಿಹಾಸದಲ್ಲಿ ಅಳಿಸಲಾಗದ ಹೆಸರಾಗಿರುವ ಎಸ್.ಜಾನಕಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಮೂಲಕ ಸಂಗೀತ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಬೇಕಿದೆ ಎಂದು ಹೇಳಿದರು.

     ಆರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅಪರೂಪದ ಕಂಠಸಿರಿಯಿಂದ ಭಾರತೀಯ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ್ದ ಜಾನಕಿ ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಕೇಶವ ಕಾಮತ್ ಹೇಳಿದರು.

ಕಡ್ಲೇರ ತುಳಸಿ ಮೋಹನ್ , ಎಸ್.ಜಾನಕಿ ಅವರ ಪುಷ್ಪ ನಮನ ಗೀತೆ ಹಾಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ , ಗಾಯಕರಿಗೆ ಪ್ರಶಂಸನಾ ಪತ್ರ ವಿತರಿಸಿದರು.

ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಪುದಿನೆರವನ ರೇವತಿ ರಮೇಶ್, ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್, ಲೇಖಕರ ಬಳಗದ ಪ್ರಧಾನ ಕಾರ್ಯದರ್ಶಿ ಭಾರತಿ ರಮೇಶ್, ಸಹ ಕಾರ್ಯದರ್ಶಿ ಕೆ.ವಿ.ಉಮೇಶ್,ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಮಾಜಿ ಅಧ್ಯಕ್ಷ ಅಂಬೇಕಲ್ ನವೀನ್,

ಜಿಲ್ಲಾ ಜಾನಪದ ಪರಿಷತ್ ನ ಅಧ್ಯಕ್ಷ ಬಿ.ಜಿ.ಅನಂತಶಯನ, ನಿವೃತ್ತ ಪ್ರಾಂಶುಪಾಲ ಕೆ.ಜೆ ದಿವಾಕರ್, ಜಿಲ್ಲಾ ದಸಂಸ ಸಂಚಾಲಕ ಎಚ್.ಎಲ್.ದಿವಾಕರ್, ಸುಬ್ರಾಯ ಸಂಪಾಜೆ , ರಂಜಿತ್ ಕವಲಪಾರ ಇತರರು ಇದ್ದರು.

ರಂಜಿತ್ ಕವಲಪಾರ ನಿರ್ವಹಿಸಿದರು. ಕೆ.ತಿಮ್ಮಪ್ಪ ಸ್ವಾಗತಿಸಿದರು. ರೇವತಿ ರಮೇಶ್ ವಂದಿಸಿದರು.ಗಾಯನ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಗಾಯಕರು ಎಸ್.ಜಾನಕಿ ಅವರ ಹಾಡಿರುವ ಹಾಡುಗಳನ್ನು ಹಾಡಿ ಸಂಗೀತಪ್ರಿಯರನ್ನು ರಂಜಿಸಿದರು.

ಜಾನಕಿ ಅವರಿಗೆ ಪುಷ್ಪ ನಮನ:

ಗೀತ ಗಾಯನ ಕಾರ್ಯಕ್ರಮಕ್ಕೆ ಸಹಯೋಗ ನೀಡಿದ್ದ ಸಹಮತ ವೇದಿಕೆ, ಮಡಿಕೇರಿ ಲಯನ್ಸ್ ಸಂಸ್ಥೆ, ಕೊಡಗು ಜಾನಪದ ಪರಿಷತ್ತು, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ, ನಗರ ಕ್ರೈಸ್ತ ಸಹಕಾರ ಸಂಘ, ಕೊಡಗು ಹಿತ ರಕ್ಷಣಾ ವೇದಿಕೆ ಹಾಗೂ ಚೌಡೇಶ್ವರಿ ದೇವಾಂಗ ಮಹಿಳಾ ಸಹಕಾರ ಬ್ಯಾಂಕ್ , ಕೊಡಗು ಪತ್ರಕರ್ತರ ಸಂಘ,ಸ್ಕೌಟ್ಸ್, ಗೈಡ್ಸ್ ನ ಜಿಲ್ಲಾ ಸಂಸ್ಥೆ, ಜಿಲ್ಲಾ ಅಹಿಂದ ಒಕ್ಕೂಟ ಸೇರಿದಂತೆ ಮತ್ತಿತರ ಸಂಸ್ಥೆಗಳ ಪದಾಧಿಕಾರಿಗಳು ಜತೆಗೂಡಿ ಎಸ್.ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಗಮನ ಸೆಳೆದ ಗಾನಸುಧೆ:

ಗೀತ ನಮನ ಕಾರ್ಯಕ್ರಮದಲ್ಲಿ ಈ ಕೆಳಕಂಡ ಕಲಾವಿದರು ತಮ್ಮ ಮಧುರಕಂಠದಿಂದ ಎಸ್.ಜಾನಕಿ ಅವರ ಹಾಡನ್ನು ಹೇಳಿ ಸಂಗೀತಪ್ರಿಯರ ಗಮನ ಸೆಳೆದರು.

   ಡಾ ಕಾವೇರಿ ಪ್ರಕಾಶ್, ಅಂಬೇಕಲ್ ನವೀನ್, ಕಡ್ಲೇರ ತುಳಸಿ ಮೋಹನ್, ಭಾರತಿ ರಮೇಶ್,ಸುಜಾತ ಗುರುಪ್ರಸಾದ್ , ತನುಶ್ರೀ , ಗೀತಾ ಸಂಪತ್ , ಡಿಂಪಲ್ ಹೊನ್ನಪ್ಪ ಸಿದ್ದಾಪುರ , ಶ್ವೇತಾ ರವೀಂದ್ರ , ಕುಶಾಲನಗರದಸೂದನ ಗೋಪಾಲ, ಅಂಬಿಕಾ ರಾವ್,ಕೆ.ವಿ.ಉಮೇಶ್, ಬಿ.ಎಸ್.ಪರಮೇಶ್,ಕು. ಸಪ್ನ ಮಧುಕರ್ ಶೇಟ್ , ಮಂದ್ರಿರ ಸುಗೀತ ಹೊಸಕೇರಿ, ಬಿ.ಜಿ.ಅನಂತ ಶಯನ, ಎಚ್ ಎಸ್.ರಶ್ಮಿ ಹೊದವಾಡ,ಹೇಮಾ ಅಜಿತ್ ,ಪಂಚಮಿ ಬಿ.ಬಿ., ಡಿ.ಎಂ ಶಿವರಂಜಿನಿ ಮತ್ತು ಪಿ.ಎಂ. ಮೇಘನಾ ,ಮೇಘಾ ಸುಜಯ್ , ಟಿ.ಎಸ್.ಗಾಯತ್ರಿ, ಮೇಘಾ ಸುಜಯ್ ಹೆಚ್ ಎಸ್ ಲೋಕೇಶ್ ಮತ್ತು ಚಂಗಪ್ಪ,ಪ್ರೇಮ ರಾಘವಯ್ಯ ಚೊಕ್ಕಾಡಿ, ಕೇಕಡ ಇಂದುಮತಿ ರವೀಂದ್ರ, ಇನ್ಸ್‌ಪೆಕ್ಟರ್ ಚಂದ್ರಶೇಖರ್,ಪಿಎಸ್ಐ ವೈರ್‌ಲೆಸ್ ಧನಂಜಯ್ ಕೆ ಎಸ್, ಎಎಸ್ಐ ರಾಜೇಶ್, ಹೆಡ್ ಕಾನ್ಸ್ಟೆಬಲ್ ಗಳಾದ ಸುಧೀರ್ ಹೆಚ್ ಎಸ್, ಬಸವರಾಜು, ಶಶಿಧರ್ ಸೇರಿದಂತೆ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ, ಕೊಡಗು ಜಿಲ್ಲಾ, ಮಹಿಳಾ ಬರಹಗಾರರ ಸಂಘ , ಶೃತಿಲಯ ತಂಡ ಮಡಿಕೇರಿ ಸೇರಿದಂತ ವಿವಿಧ ತಂಡದ ಗಾಯಕರು ಹಾಡು ಹೇಳಿ ಗಮನ ಸೆಳೆದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0