ಕೋಮು ಪ್ರಚೋದನೆ, ದ್ವೇಷ ಭಾಷಣ, ಗೋರಕ್ಷಣೆ ಹೆಸರಿನ ಗೂಂಡಾಗಿರಿ ಆರೋಪಿಗಳ ಮೇಲಿನ ಪ್ರಕರಣಗಳನ್ನು ಸರ್ಕಾರ ಹಿಂಪಡೆದಿರುವುದನ್ನು ಖಂಡಿಸಿ ಎಸ್‌ಡಿಪಿಐ ಮಡಿಕೇರಿಯಲ್ಲಿ ಪ್ರತಿಭಟನೆ
admincoorgdaily

ಮಡಿಕೇರಿ: ಕೋಮು ಪ್ರಚೋದನೆ, ದ್ವೇಷ ಭಾಷಣ, ಗೋರಕ್ಷಣೆ ಹೆಸರಿನ ಗೂಂಡಾಗಿರಿ ಆರೋಪಿಗಳ ಮೇಲಿನ ಪ್ರಕರಣಗಳನ್ನು ಸರ್ಕಾರ ಹಿಂಪಡೆದಿರುವುದನ್ನು ಖಂಡಿಸಿ ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಎಸ್‌ಡಿಪಿಐ ಪ್ರತಿಭಟಿಸಿತು.
ಸಮಾಜದಲ್ಲಿ ಕೋಮು ಪ್ರಚೋದನೆ, ದ್ವೇಷ ಭಾಷಣ, ಗಲಭೆ ಸೃಷ್ಟಿ ಹಾಗೂ ಗೋ ರಕ್ಷಣೆ ಹೆಸರಿನಲ್ಲಿ ಗೂಂಡಾಗಿರಿ ನಡೆಸಿರುವ ಪುನರಾವರ್ತಿತ ಅಪರಾಧಿಗಳ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಸಹ ಸರ್ಕಾರ ಹಿಂಪಡೆದಿರುವುದು ಅತ್ಯಂತ ಖಂಡನೀಯವಾಗಿದೆ.
ಇಂತಹ ಕ್ರಮವು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯುಂಟುಮಾಡುವ ಜೊತೆಗೆ ಕಾನೂನು ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಕುಂದಿಸುವಂತಾಗಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಉಸ್ಮಾನ್ ಸುಂಟಿಕೊಪ್ಪ, ಮಡಿಕೇರಿ ನಗರಸಭೆ ಸದಸ್ಯರಾದ ಮನ್ಸೂರ್ ಆಲಿ, ಬಶೀರ್ ಹಾಗೂ ಎಸ್‌ಡಿಪಿಐ ಕಾರ್ಯಕರ್ತರಿದ್ದರು.