ಮಡಿಕೇರಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು SDPI ಒತ್ತಾಯ
ಮಡಿಕೇರಿ:SDPI ಮಡಿಕೇರಿ ನಗರ ಸಮಿತಿ ವತಿಯಿಂದ ಮಡಿಕೇರಿ ನಗರದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಮಡಿಕೇರಿ ನಗರಸಭೆ ಪೌರಾಯುಕ್ತರ ಮತ್ತು ಅಧ್ಯಕ್ಷರ ಗಮನ ಸೆಳೆದು ಬೀದಿ ನಾಯಿಗಳಿಂದ ನಗರದ ಜನತೆಗೆ ಆಗುತ್ತಿರುವ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಬೇಕೆಂದು ಮನವಿ ಸಲ್ಲಿಸಿದರು. ನಿಯೋಗದಲ್ಲಿ SDPI ನಗರಸಭೆ ಸದಸ್ಯರಾದ ಮನ್ಸೂರ್ ಅಲಿ, ನಗರ ಸಮಿತಿ ಅಧ್ಯಕ್ಷರಾದ ಮಹಮ್ಮದ್ ಅಲಿ, ನಗರ ಕಾರ್ಯದರ್ಶಿ ಉಬೈದ್,ಜೊತೆ ಕಾರ್ಯಧರ್ಶಿ ಅಬ್ದುಲ್ ಜಲೀಲ್, ಇಬ್ರಾಹಿಂ, ಉಮ್ಮರ್, ಮತ್ತು ನಗರ ಸಮಿತಿ ಪಧಾಧಿಕಾರಿಗಳು ಹಾಜರಿದ್ದರು