ಎಸ್ಐಆರ್: ಕರ್ನಾಟಕದಲ್ಲಿ 1 ಕೋಟಿ 09 ಲಕ್ಷ ಮತದಾರರು ಕರಡು ಪಟ್ಟಿಯಿಂದ ಡಿಲೀಟ್
ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮನೆ ಮನೆ ಸಮೀಕ್ಷೆ ಮತ್ತು ಡಿಜಿಟಲೀಕರಣ ಕಾರ್ಯವು 100% ಪೂರ್ಣಗೊಂಡಿದೆ ಎಂದು ಮುಖ್ಯ ಚುನಾವಣಾಧಿಕಾರಿಯವರ ಕಚೇರಿ ದಿನಾಂಕ 07.08.2026ರಂದು ಪ್ರಕಟಿಸಿದೆ. ಕರ್ನಾಟಕ ಮುಖ್ಯ ಚುನಾವಣಾಧಿಕಾರಿಯವರು ಬಿಡುಗಡೆ ಮಾಡಿರುವ ದೈನಂದಿನ ಪತ್ರಿಕಾ ಪ್ರಕಟಣೆಯ ಪ್ರಕಾರ, ಒಟ್ಟು ಮತದಾರರು 16.06.2026ರ ಪ್ರಕಾರ ರಾಜ್ಯದಲ್ಲಿ 5,54,32,314 ಮತದಾರರಿದ್ದಾರೆ. ಡಿಜಿಟಲೀಕರಣ 5,54,32,132 ಎನ್ಯುಮರೇಶನ್ ಫಾರ್ಮ್‌ಗಳು ಡಿಜಿಟಲೀಕರಣಗೊಂಡಿವೆ.
1.09 ಕೋಟಿ ಮಂದಿ ASDDO ವರ್ಗದಲ್ಲಿ:
ಡಿಜಿಟಲೀಕರಣಗೊಂಡ ಫಾರ್ಮ್‌ಗಳಲ್ಲಿ 4,44,48,231 ಅಂದರೆ ಶೇ.80.18 ಮಂದಿ ಸಾಮಾನ್ಯ ಮತದಾರರು. ಉಳಿದ 1,09,83,901 ಮಂದಿ ಅಂದರೆ ಶೇ.19.81 ಮಂದಿಯನ್ನು ASDDO ಎಂದು ಗುರುತಿಸಲಾಗಿದೆ. ASDDO ವರ್ಗದ ವಿವರ: ಸ್ಥಳಾಂತರಗೊಂಡವರು 66,14,954,ಮೃತಪಟ್ಟವರು 16,34,326 , ಗೈರು/ಪತ್ತೆಯಾಗದವರು15,90,165, ಎರಡು ಕಡೆ ಹೆಸರಿರುವವರು 6,96,536,ಇತರೆ 4,47,920
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
