ಎಸ್ಐಆರ್: ಕರ್ನಾಟಕದಲ್ಲಿ 1 ಕೋಟಿ 09 ಲಕ್ಷ ಮತದಾರರು ಕರಡು ಪಟ್ಟಿಯಿಂದ ಔಟ್
ಬೆಂಗಳೂರು:ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯದ ಪ್ರಗತಿ ಕುರಿತು ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿ ದಿನಾಂಕ 02.08.2026 ರಂದು ಸಂಜೆ 4 ಗಂಟೆಗೆ ದೈನಂದಿನ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.
16.06.2026 ರಂತೆ ಒಟ್ಟು ಮತದಾರರು 5,54,32,314,ಗಣತಿ ನಮೂನೆ (EF) ಮುದ್ರಣ 5,54,32,314, ಗಣತಿ ನಮೂನೆ ವಿತರಣೆ 5,54,32,314, ರಾಜ್ಯದಲ್ಲಿ ಒಟ್ಟು 4,40,28,033 ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, ಇದು ಶೇ.79.43 ರಷ್ಟಾಗಿದೆ.
ASDDO ವರ್ಗದ ಮತದಾರರು - 1,09,14,788 (19.69%)* ಡಿಜಿಟಲೀಕರಣ ಆಗದ ಮತದಾರರಲ್ಲಿ ಶಾಶ್ವತವಾಗಿ ಸ್ಥಳಾಂತರಗೊಂಡವರು 65,39,865,ಪತ್ತೆಯಾಗದ / Absent ಮತದಾರರು 15,92,405,ಮೃತಪಟ್ಟ ಮತದಾರರು 16,13,863,ಈಗಾಗಲೇ ದಾಖಲಾದ ಮತದಾರರು 6,69,105, ಇತರೆ 4,99,550, ಆನ್‌ಲೈನ್ ಸಲ್ಲಿಕೆ ಒಟ್ಟು 6,82,811 ಮತದಾರರು. ಆನ್‌ಲೈನ್ ಮೂಲಕ ಗಣತಿ ನಮೂನೆ ಸಲ್ಲಿಸಿದ್ದಾರೆ. ಇದು ಶೇ.1.23 ರಷ್ಟಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
